Oct 8, 2020, 2:05 PM IST
ಬೆಂಗಳೂರು (ಅ. 08): ಆರ್‌ಆರ್ ನಗರ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕೈ ಅಭ್ಯರ್ಥಿ ಕುಸುಮಾ ಪ್ರಚಾರ ಆರಂಭಿಸಿದ್ದಾರೆ. ಯಶವಂತಪುರ ಬಿಕೆ ನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ಧಾರೆ. ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕುಸುಮಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಡಿಕೆ ರವಿ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕುಸುಮಾ, ನನ್ನ ವಿರುದ್ಧ ಡಿ.ಕೆ.ರವಿ ತಾಯಿ ಕೊಟ್ಟ ಹೇಳಿಕೆಯನ್ನು ಆಶೀರ್ವಾದ ಅಂತ ತಿಳ್ಕೋತ್ತೇನೆ. ದೊಡ್ಡವರು ಅವರು ಮಾತಾಡಲಿ... ಅದು ನನಗೆ ಆಶೀರ್ವಾದ ಎಂದುಕೊಳ್ಳುತ್ತೇನೆ' ಎಂದು ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಕುಸುಮಾ ಹೇಳಿದ್ಧಾರೆ.
ಬೈ ಎಲೆಕ್ಷನ್: ಡಿಕೆಶಿಯನ್ನು ದಿಢೀರ್ ಭೇಟಿಯಾದ ಆರ್ ಆರ್ ನಗರ ಅಭ್ಯರ್ಥಿ..!
ಯಾವುದೇ ಒತ್ತಡಕ್ಕೆ ಒಳಗಾಗಿ ನಾನು ಚುನಾವಣಾ ಸ್ಪರ್ಧೆಗೆ ಇಳಿದಿಲ್ಲ. ಜನರ ಸೇವೆಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡ್ತೇದ್ದೇನೆ. ಶಿಕ್ಷಣಕ್ಕೆ ಒತ್ತು ಕೊಡುವ ಸಂಕಲ್ಪ ಹೊಂದಿದ್ದೇನೆ. ಕುಸುಮಾ ಯಾರು ಅನ್ನೋರಿಗೆ ಇದೇ ನನ್ನ ಉತ್ತರ ಎಂದಿದ್ದಾರೆ.