ಬಿಜೆಪಿಗೆ ಜಗದೀಶ್ ಶೆಟ್ಟರ್ ಗುಡ್ ಬೈ ಹೇಳಿ ಕಾಂಗ್ರೆಸ್‌ಗೆ ಮಾಜಿ ಸಿಎಂ ಜೈ ಎಂದಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಯುವನಾಯಕ ರಜತ್ ಉಳ್ಳಾಗಡ್ಡಿಮಠ, ಜಗದೀಶ್ ಶೆಟ್ಟರ್‌ಗಾಗಿ ಕ್ಷೇತ್ರತ್ಯಾಗ ಮಾಡಿದ್ದಾರೆ.
ಬಿಜೆಪಿಗೆ ಜಗದೀಶ್ ಶೆಟ್ಟರ್ ಗುಡ್ ಬೈ ಹೇಳಿ ಕಾಂಗ್ರೆಸ್‌ಗೆ ಮಾಜಿ ಸಿಎಂ ಜೈ ಎಂದಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಯುವನಾಯಕ ರಜತ್ ಉಳ್ಳಾಗಡ್ಡಿಮಠ, ಜಗದೀಶ್ ಶೆಟ್ಟರ್‌ಗಾಗಿ ಕ್ಷೇತ್ರತ್ಯಾಗ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್ ಜತೆ ಮಾತನಾಡಿದ ಅವರು ಉತ್ತರ ಕರ್ನಾಟಕದ ಲಿಂಗಾಯತ ಲೀಡರ್ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಪ್ರಭಾವಿ ನಾಯಕನ ಆಗಮನ ನಮಗೆ ಖುಷಿ ಕೊಟ್ಟಿದೆ. ಪಕ್ಷಕ್ಕಾಗಿ ಕ್ಷೇತ್ರ ತ್ಯಾಗ ಮಾಡಿದ್ದು ದೊಡ್ಡ ವಿಚಾರವಲ್ಲ. ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ,ಶೆಟ್ಟರ್ ಏಳನೇ ಬಾರಿ ಗೆದ್ದು ವಿಧಾನಸೌಧ ಪ್ರವೇಶಿಸಬೇಕು ಶೆಟ್ಟರನ್ನು ಸೆಂಟ್ರಲ್ ಕ್ಷೇತ್ರದಿಂದ ಗೆಲ್ಲಿಸುತ್ತೇವೆಂದು ಎಂದು ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೇಳಿದ್ದಾರೆ.