ಮತ್ತೆ ಚರ್ಚೆಗೆ ಗ್ರಾಸವಾದ ಸಿದ್ದರಾಮಯ್ಯನವರ ಐದು ವರ್ಷ ಸಿಎಂ ಸ್ಥಾನ, ಕರಸೇವಕರ ಬೆನ್ನಲ್ಲೇ ದತ್ತಪೀಠ ಹೋರಾಟಗಾರರ ಟಾರ್ಗೆಟ್ ಮಾಡಿತಾ ಕಾಂಗ್ರೆಸ್ ಸರ್ಕಾರ, ನಾನು ಕರಸೇವಕ, ನನ್ನನ್ನೂ ಬಂಧಿಸಿ, ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ, ಮಂಗಳೂರಿನಲ್ಲಿ ಕರಸೇವಕರಿಗೆ ಸನ್ಮಾನಿಸಿದ ನಮೋ ಬ್ರಿಗೇಡ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಲ್ಲ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗತ್ತಾರೆ ಅನ್ನೋ ಹಲವು ಹೇಳಿಕೆಗಳು ಈಗಾಗಲೇ ಕೋಲಾಹಲ ಎಬ್ಬಿಸಿದೆ. ಇದೀಗ ಸಿದ್ದರಾಮಯ್ಯ ಪುತ್ರ ಯಿತೀಂದ್ರ ಸಿದ್ದರಾಮಯ್ಯ ಇದೇ ವಿಚಾರವಾಗಿ ಜನರಲ್ಲಿ ಮಹತ್ವದ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲು ಕೆಲ ಅಗತ್ಯತೆ ಕುರಿತು ಯತೀಂದ್ರ ವಿವರಿಸಿದ್ದಾರೆ. ಇದೇ ಭಾಷಣದಲ್ಲಿ ಭಾರತ ಹಿಂದೂ ರಾಷ್ಟ್ರವಾದರೆ ದಿವಾಳಿಯಾಗಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಜಾತ್ಯಾತೀತ ತತ್ವದ ಆಧಾರದಲ್ಲಿ ಆಡಳಿತ ನಡೆಸಿದರೆ ಮಾತ್ರ ಅಭಿವದ್ಧಿ ಸಾಧ್ಯ ಎಂದಿದ್ದಾರೆ.