Minority PM: ಬ್ರಿಟನ್‌ನಲ್ಲಿ ರಿಷಿ ಸುನಕ್ ಪ್ರಧಾನಿ ಆಗಿದ್ದೇ ಆಗಿದ್ದು, ಭಾರತದಲ್ಲಿ ರಾಜಕೀಯದಾಟ ಶುರುವಾಗಿದೆ. ಬ್ರಿಟನ್‌ನಂತೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತ ವ್ಯಕ್ತಿ ಪಿಎಂ ಆಗೋದು ಯಾವಾಗ ಎಂದು ಪ್ರಶ್ನಿಸಿದ ಕಾಂಗ್ರೆಸ್‌ಗೆ, ಬಿಜೆಪಿ ಕೂಡ ದಿಟ್ಟ ತಿರುಗೇಟು ನೀಡಿತ್ತು.
ಬೆಂಗಳೂರು (ಅ. 27): ಬ್ರಿಟನ್‌ನಲ್ಲಿ ರಿಷಿ ಸುನಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ದೇಶದಲ್ಲಿ ವಿರೋಧ ಪಕ್ಷಗಳಲ್ಲಿ ತಳಮಳ ಶುರುವಾಗಿದೆ. ರಿಷಿ ಸುನಕ್ ಅವರು ಜನಾಂಗೀಯ ಅಲ್ಪಸಂಖ್ಯಾತರು. ಬ್ರಿಟನ್‌ನಲ್ಲಿ ಕೇವಲ ಶೇ.3ರಷ್ಟಿರುವ ಹಿಂದು ಸಮುದಾಯದವರು. ಅವರಿಗೆ ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆ ಸಿಕ್ಕಿದೆ, ಈ ವಿಚಾರದಲ್ಲಿ ಭಾರತ ಕಲಿಯೋದ್ಯಾವಾಗ ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡಿದ್ದವು.
ಅದರರ್ಥ, ಅಲ್ಪಸಂಖ್ಯಾತ ವ್ಯಕ್ತಿ ಭಾರತದಲ್ಲಿ ಪ್ರಧಾನಿ ಆಗೋದು ಯಾವಾಗ ಎಂದು ಮಾಜಿ ಸಚಿವ ಪಿ ಚಿದಂಬರಂ, ಶಶಿ ತರೂರ್, ಮೆಹಬೂಬಾ ಮುಫ್ತಿ ಪ್ರಶ್ನೆ ಮಾಡಿದ್ದರು. ಇದಕ್ಕೆ ತೀಕ್ಷ್ಣ ಉತ್ತರ ನೀಡಿ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿ ಆಗಿದ್ದರು. ಅಬ್ದುಲ್ ಕಲಾಂ 5 ವರ್ಷ ರಾಷ್ಟ್ರಪತಿಯಾಗಿದ್ದರು ಎನ್ನುವ ಲಿಸ್ಟ್‌ಗಳನ್ನೇ ನೀಡಿದೆ.
UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್..!
ಈಗ ಮತ್ತೆ ವರಸೆ ಬದಲಾಯಿಸಿರುವ ಶಶಿ ತರೂರ್, ವಿಸಿಬಲ್ ಮೈನಾರಿಟಿಯ ಪಿಎಂ ಕೇಳಿದ್ದಾಗಿ ಹೇಳಿದ್ದಾರೆ. ಅದರರ್ಥ, ನೋಡಿದ ತಕ್ಷಣ ಕಾಣ ಸಿಗುವ ಅಲ್ಪಸಂಖ್ಯಾತ ಅಂದರೆ ಮುಸ್ಲಿಂ ವ್ಯಕ್ತಿ ಪ್ರಧಾನಿ ಆಗುವುದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. 'ಒಬ್ಬ ಮುಸ್ಲಿಂ, ಒಬ್ಬ ಕ್ರಿಶ್ಚಿಯನ್ ಪ್ರಧಾನಿಯಾಗುವುದನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.