ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?

ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?

Published : Feb 19, 2026, 11:56 PM IST

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರಕ್ಕಾಗಿನ ಪೈಪೋಟಿ ತೀವ್ರಗೊಂಡಿದೆ. ಸಿದ್ದರಾಮಯ್ಯ ಬಣದ ಇಪ್ಪತ್ತಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದು, ಇದು ಡಿಕೆಶಿ ಬಣದಲ್ಲಿ ಆತಂಕ ಸೃಷ್ಟಿಸಿದೆ.

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದ್ಯಕ್ಕೆ ಎಲ್ಲವೂ ಶಾಂತವಾಗಿದೆ ಎಂದು ಮೇಲ್ನೋಟಕ್ಕೆ ಕಂಡರೂ, ತೆರೆಯ ಮರೆಯಲ್ಲಿ 'ಸಿಂಹಾಸನ ಯುದ್ಧ' ಮಾತ್ರ ಧಗಧಗಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಪಟ್ಟದ ಜಿದ್ದಾಜಿದ್ದಿ ಈಗ ಅಕ್ಷರಶಃ ಸಪ್ತಸಾಗರಗಳನ್ನು ದಾಟಿದೆ. ಹೌದು, ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಈ 'ಅಗೋಚರ ಆಟ' ಈಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿದೆ.


ಶಾಸಕರ ವಿದೇಶ ಪ್ರವಾಸ: ಬರೀ ಮೋಜಲ್ಲ, ಇದು ರಣತಂತ್ರ!

ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದಂಡು ಈಗ ವಿದೇಶ ಪ್ರವಾಸದಲ್ಲಿದೆ. ಮೊದಲು ಆಸ್ಟ್ರೇಲಿಯಾ, ನಂತರ ನ್ಯೂಜಿಲೆಂಡ್ ಪ್ರವಾಸ ಹಮ್ಮಿಕೊಂಡಿರುವ ಈ ಶಾಸಕರ ಪೈಕಿ ಬಹುತೇಕರು ಸಿದ್ದರಾಮಯ್ಯ ಅವರ ಪರಮಾಪ್ತರು ಎನ್ನುವುದು ಈಗ ಗಾಂಧಿನಗರದ ಪಡಸಾಲೆಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ಅವರು ತಮಗೆ ಪಟ್ಟ ಸಿಗಲೇಬೇಕು ಎಂದು 'ಬಂಡೆ ಪಟ್ಟು' ಹಿಡಿದಿರುವ ಬೆನ್ನಲ್ಲೇ, ಸಿದ್ದು ಸೇನೆಯ ಈ ಸದ್ದಿಲ್ಲದ ಮೂವ್‌ಮೆಂಟ್ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಯಾರು ಈ ಅಗೋಚರ ಆಟದ ಸೂತ್ರಧಾರ?
ಈ ವಿದೇಶ ಪ್ರವಾಸದ ಹಿಂದಿನ ಅಸಲಿ ಮಾಸ್ಟರ್‌ಮೈಂಡ್ ಯಾರು ಎಂಬುದು ಸದ್ಯದ ಪ್ರಶ್ನೆ. ಶಾಸಕರನ್ನು ಒಗ್ಗೂಡಿಸಿ ವಿದೇಶಕ್ಕೆ ಕಳುಹಿಸುವ ಮೂಲಕ ಸಿದ್ದರಾಮಯ್ಯ ಬಣ ತನ್ನ ಸಂಖ್ಯಾಬಲವನ್ನು ಪ್ರದರ್ಶಿಸುತ್ತಿದೆಯೇ? ಅಥವಾ ಮುಂದಿನ ರಾಜಕೀಯ ಸಂಚಲನಕ್ಕೆ ಇದು ತಾಲೀಮೇ? ಎಂಬ ಚರ್ಚೆಗಳು ಶುರುವಾಗಿವೆ. ಡಿಕೆಶಿ ಬಣಕ್ಕೆ ಕಿಂಚಿತ್ತೂ ಸುಳಿವು ಸಿಗದಂತೆ ಈ ಪ್ರವಾಸ ಪ್ಲಾನ್ ಆಗಿದ್ದು, ಇದು 'ಬಂಡೆ' ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ವಿದೇಶಕ್ಕೆ ಹಾರಿದ ಶಾಸಕರ ಮೇಲೆ 'ಶಿವ'ನ ಕಣ್ಣು!

ಸಪ್ತಸಾಗರದಾಚೆ ಶಾಸಕರು ಎಂಜಾಯ್ ಮಾಡುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಕುಳಿತು 'ಶಿವ' (ಡಿ.ಕೆ. ಶಿವಕುಮಾರ್) ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಯಾವ ಯಾವ ಶಾಸಕರು ಪ್ರವಾಸದಲ್ಲಿದ್ದಾರೆ? ಅಲ್ಲಿ ಯಾರ್ಯಾರು ಯಾರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ? ಎಂಬ ಬಗ್ಗೆ ಡಿಕೆಶಿ ಬಣ ಹದ್ದಿನ ಕಣ್ಣಿಟ್ಟಿದೆ. ಈ ಶಕ್ತಿಯುದ್ಧ ಈಗ ಹೈಕಮಾಂಡ್ ಮಟ್ಟಕ್ಕೆ ತಲುಪುವ ಲಕ್ಷಣಗಳು ಕಾಣುತ್ತಿವೆ.

ಅಂತರ್ಯುದ್ಧಕ್ಕೆ ಮುನ್ನುಡಿಯೇ ಈ ಪ್ರವಾಸ?

ಬಜೆಟ್ ಅಧಿವೇಶನದ ಬೆನ್ನಲ್ಲೇ ಇಷ್ಟು ದೊಡ್ಡ ಮಟ್ಟದ ಶಾಸಕರ ದಂಡು ವಿದೇಶಕ್ಕೆ ಹಾರಿದ್ದು ಕೇವಲ ಪ್ರವಾಸಕ್ಕಾಗಿ ಅಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಶಾಸಕರನ್ನು ಹಿಡಿದಿಟ್ಟುಕೊಳ್ಳುವ, ಅವರ ಮನವೊಲಿಸುವ ಅಥವಾ ಗುಂಪುಗಾರಿಕೆಯನ್ನು ಗಟ್ಟಿಗೊಳಿಸುವ 'ಅಗೋಚರ ಆಟ' ಇದರ ಹಿಂದೆ ಅಡಗಿದೆ. ರಾಜ್ಯ ರಾಜಕಾರಣದ ಮುಂದಿನ ತಿರುವುಗಳಿಗೆ ಈ ವಿದೇಶ ಪ್ರವಾಸವೇ ಅಡಿಪಾಯವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಒಟ್ಟಾರೆಯಾಗಿ, ಕಾಂಗ್ರೆಸ್ ಕೋಟೆಯೊಳಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಈಗ ವಿರಾಮದ ಹಂತ ದಾಟಿ, ವಿದೇಶಿ ನೆಲದಲ್ಲಿ ಶಕ್ತಿ ಪ್ರದರ್ಶನದ ರೂಪ ಪಡೆದುಕೊಂಡಿದೆ. ಈ ಆಟದ ಅಂತ್ಯ ಯಾರಿಗೆ ಜಯ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more