ಕಾಂಗ್ರೆಸ್ ಸರ್ಕಾರ ಹತ್ತಿ ಹಣ್ಣು ಇದ್ದಂತೆ; ಹೊರಗೆಲ್ಲಾ ಬೆಳಕು, ಒಳಗೆಲ್ಲಾ ಹುಳುಕು?

ಕಾಂಗ್ರೆಸ್ ಸರ್ಕಾರ ಹತ್ತಿ ಹಣ್ಣು ಇದ್ದಂತೆ; ಹೊರಗೆಲ್ಲಾ ಬೆಳಕು, ಒಳಗೆಲ್ಲಾ ಹುಳುಕು?

Published : Dec 19, 2024, 08:24 PM ISTUpdated : Dec 19, 2024, 08:36 PM IST

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನದ ಕೊರತೆ ಮತ್ತು ಮುಖ್ಯಮಂತ್ರಿಗಳ ನಿರ್ಲಕ್ಷ್ಯದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಅನುದಾನ ಕೇಳಿದ ಶಾಸಕರಿಗೆ ಗಪ್‌ಚುಪ್ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆಯಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಡಿ.19): ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನ್ನೋ ಸುದ್ದಿ ಇದೆ.. ಅಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು, ನಮ್ಮ ಮಾತಿಗೆ ಕಿಮ್ಮತ್ತಿಲ್ವಾ? ಶಾಸಕರ ಸಮಸ್ಯೆ ಏನು? ನೋವು ಏನು ಅಂತ ಮುಖ್ಯಮಂತ್ರಿಗಳು ಕೇಳಿಸಿಕೊಳ್ತಾ ಇಲ್ಲ.. ಶಾಸಕರ ದುಃಖ ದುಮ್ಮಾನ ಏನು ಅಂತ  ಉಪಮುಖ್ಯಮಂತ್ರಿಗಳು ಗಮನಿಸ್ತಾ ಇಲ್ಲ, ಅಂತ ಹಲವರು ಅಸಮಾಧಾನ ಹೊರ ಹಾಕಿದ್ದಾರೆ.

ಅನುದಾನದ ಬಗ್ಗೆ ಚರ್ಚಿಸೋಕೆ ಬಂದಿದ್ದ ಶಾಸಕರಿಗೆ ಭಾರೀ ನಿರಾಸೆಯಾಗಿದೆ.. ಯಾಕಂದ್ರೆ, ಅನುದಾನ ಕೇಳಿದ ಶಾಸರಿಗೆ ಗಪ್‌ಚುಪ್  ಅಂತ ಹೇಳಿದ್ರಂತೆ ಸಿಎಂ.. ಅಷ್ಟೇ ಅಲ್ಲ, ಭಾಷಣ ಮಾಡಿ ಶಾಸಕಾಂಗ ಸಭೆ ಅಂತ್ಯ ಹಾಡಿದ ಸಿಎಂ, ಡಿಸಿಎಂ ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದಾರೆ.. ಬಿಜೆಪಿಗೆ ವಕ್ಫ್, ಪಂಚಮಸಾಲಿ, ಅನುದಾನ ವಿಚಾರ  ಬಿಟ್ರೆ, ಅಧಿವೇಶನದಲ್ಲಿ ಬಿಜೆಪಿಗೆ ಯಾವುದೇ ವಿಚಾರವಿಲ್ಲ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಅಷ್ಟೇ ಅಲ್ಲ, ಸರ್ಕಾರದ ಬೊಕ್ಕಸದಲ್ಲಿ  ದುಡ್ಡಿಲ್ಲ ದುಡ್ಡಿಲ್ಲ ಅಂತ ಹೇಳಬೇಡಿ, ನಮ್ಮ ಹತ್ರ ದುಡ್ಡಿದೆ.. ಬಿಜೆಪಿಯವರು ಸುಮ್ಮನೆ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ, ಅಂತ ಹೇಳಿದಾರೆ.. ಅಷ್ಟೇ ಅಲ್ಲ, ದುಡ್ಡಿಲ್ಲದಿದ್ರೆ ರೋಣದಲ್ಲಿ ₹200 ಕೋಟಿ ಕೆಲಸ ಆಗ್ತಿತ್ತಾ, ಅಂತ ಮರುಪ್ರಶ್ನೆ ಮಾಡಿದಾರೆ.. ಬಿಜೆಪಿ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿ ಸಮಾಧಾನ ಮಾಡಿದ್ದಾರೆ.

ಆದರೆ, ಅದೇ ಸಭೆಯಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಏರುದನಿಯಲ್ಲಿ ಅನುದಾನ ಕೇಳಿದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಆಮೇಲೆ ಮಾತಾಡ್ತೀನಿ‌ ಅಂತ ಹೇಳಿದಾರೆ. ಅದೇ ಹೊತ್ತಿಗೆ  ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ಅನುದಾನಕ್ಕೆ ಬೇಡಿಕೆ ಇಟ್ಟಿದಾರೆ. ಆದ್ರೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಅನುದಾನ ಸಿಗುತ್ತದೆ. ಎಲ್ಲವೂ ಸರಿ ಹೋಗುತ್ತೆ ಅಂತ ಭರವಸೆ ಕೊಟ್ಟಿದಾರೆ. ಇದರ ಬೆನ್ನಲ್ಲೇ, ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ಸಾವಿರ ಕೋಟಿ ರೂ. ಇದೆ  ಅಂತ  ಸಚಿವ ಮಹದೇವಪ್ಪ ಹೇಳಿದಾರೆ. ಅದೇ ಹೊತ್ತಿಗೆ, ಆ ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿರಬೇಕು ಅಂತ ಮತ್ತೊಬ್ಬ ಸಚಿವರು ಯಾರೋ ಕಿಚಾಯಿಸಿದ್ದಾರಂತೆ. ಇದಿಷ್ಟೂ ಶಾಸಕಾಂಗ ಪಕ್ಷದ ಸಭೆಯ-ಒಳಗೆ ನಡೆದಿರೋದು.. ಆದ್ರೆ ಹೊರಗೆ ಕಾಣುಸ್ತಾ ಇರೋದು ಬೇರೆ..

20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Read more