ಒಂದಾದ ಹಳೇ ದೋಸ್ತಿಗಳು, ಮತಬೇಟೆಗೆ ಶುರುವಾಯ್ತು ಹೊಸ ಆಟ!

Sep 29, 2023, 10:06 PM IST

ಬೆಂಗಳೂರು (ಸೆ.29): ಇದು ಸಾಮಾನ್ಯ ದೋಸ್ತಿಯಲ್ಲ. ಇದು ಕುಮಾರಸ್ವಾಮಿಗೆ ಕೀರ್ತಿ ತಂದು ಕೊಟ್ಟಿದ್ದ ದೋಸ್ತಿ. ಇದು ಯಡಿಯೂರಪ್ಪಗೆ ಸಿಎಂ ಪಟ್ಟ ಕಟ್ಟಿದ್ದ ದೋಸ್ತಿ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕಡಿವಾಣ ಹೇರಲು ಹೊಸ ಮೈತ್ರಿ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ ಕಮಲಾಧಿಪತಿ & ದಳಪತಿ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದು ಮುಂದಿನ ಕುತೂಹಲ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ 17 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ ನಿಜ. ಅಂದ ಮಾತ್ರಕ್ಕೆ ಒಕ್ಕಲಿಗರು ಮತ್ತು ಲಿಂಗಾಯತರು ರಾಜಕೀಯವಾಗಿ ಒಂದಾಗ್ತಾರಾ..? 2019ರ ಇತಿಹಾಸ ಮರುಕಳಿಸಲಿದೆ ಅಂತ ಕಾಂಗ್ರೆಸ್ ನಾಯಕರು ಹೇಳ್ತಿರೋದು ಯಾವ ಕಾರಣಕ್ಕೆ..? ಮೈತ್ರಿವ್ಯೂಹ ಹೆಣೆದು ಯುದ್ಧಕ್ಕೆ ರೆಡಿಯಾಗಿರೋ ಕಮಲಪತಿ ಮತ್ತು ದಳಪತಿಯ ಆತ್ಮವಿಶ್ವಾಸದ ಹಿಂದಿನ ಅಸಲಿ ಗುಟ್ಟೇನು..? 

ಹಳೆ ದೋಸ್ತಿ..ಹೊಸ ಸೂತ್ರ..ಯಾರಿಗೆ ಏನು ಲಾಭ..? ದಳದೊಳಗೆ ಸೃಷ್ಟಿಯಾಗಿದೆಯಾ ಕೋಲಾಹಲ!?

1994ರ ವಿಧಾನಸಭಾ ಚುನಾವಣೆಯ ನಂತರ ಒಕ್ಕಲಿಗರು ಮತ್ತು ಲಿಂಗಾಯತರು ಸಾಲಿಡ್ ಆಗಿ ಒಂದೇ ಪಕ್ಷದ ಪರ ನಿಂತ ಇತಿಹಾಸವೇ ಇಲ್ಲ. ಹಾಗಾದ್ರೆ ಬಿಎಸ್ವೈ-ಎಚ್ಡಿಕೆ ಒಂದಾಗಿರೋದ್ರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇತಿಹಾಸ ನಿರ್ಮಾಣವಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.