Jan 16, 2023, 11:07 PM IST
ಬೆಂಗಳೂರು (ಜ.16): ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ 'ನಾ ನಾಯಕಿ' ಎನ್ನುವ ಹೆಸರಲ್ಲಿ ಸಮಾವೇಶ ಮಾಡಿದೆ. ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಮಾತನಾಡಿದರು. ಏರ್‌ಪೋರ್ಟ್‌ನಲ್ಲಿ ಪ್ರಿಯಾಂಕಾ ವಾದ್ರಾಗೆ ಅದ್ದೂರಿಯಾಗಿ ಸ್ವಾಗತ ನೀಡಲಾಗಿತ್ತು. ಸೇಬಿನ ಹಾರ ಮತ್ತು ಪೂರ್ಣಕುಂಭ ಮೂಲಕ ಸ್ವಾಗತಿಸಲಾಗಿತ್ತು.
ಇನ್ನು ಸಮಾರಂಭದ ವೇದಿಕೆಯ ಮೇಲೆ ನಾಯಕಿಯರಿಗಷ್ಟೇ ಕೂರಲು ಆಸನ ನೀಡಲಾಗಿತ್ತು. ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಪ್ರಮುಖರಿಗೆ ವೇದಿಕೆ ಮುಂಭಾಗ ಆಸನ ನೀಡಲಾಗಿತ್ತು. ಪ್ರಿಯಾಂಕಾಗೆ ಲಂಬಾಣಿ ಸಮುದಾಯದ ಹಾರ ಹಾಕಿ ಸ್ವಾಗತ ನೀಡಲಾಗಿತ್ತು.
ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮ: ಪ್ರಿಯಾಂಕಾ ಗಾಂಧಿ ಆಕರ್ಷಕ ಫೋಟೋ ವೈರಲ್
ಇನ್ನು ವೇದಿಕೆಯಲ್ಲಿ ಮಾರ್ಗರೇಟ್ ಆಳ್ವಾ,ಉಮಾಶ್ರೀ, ರಾಣಿಸತೀಶ್, ಜಲಜಾನಾಯಕ್, ಮೋಟಮ್ಮ, ಕುಸಮಾ ಶಿವಳ್ಳಿ, ಹೆಬ್ಬಾಳ್ಕರ್, ನಿಂಬಾಳ್ಕರ್, ರೂಪಾ ಶಶಿಧರ್, ಖನಿಜಾ ಫಾತಿಮಾ ಸೇರಿ ಹಲವರು ಭಾಗಿಯಾಗಿದ್ದರು. 'ಪ್ರಿಯಾಂಕಾ ವಾದ್ರಾ ಬರ್ತಾರೆ ಅಂತಾ ಬಿಜೆಪಿಯಿಂದ ಜಾಹೀರಾತು ನೀಡಲಾಗಿದೆ. ಬಿಜೆಪಿ ಒಂದೇ ಒಂದು ಕಾರ್ಯಕ್ರಮ ಸಹ ಮಹಿಳೆಯರಿಗೆ ನೀಡಿಲ್ಲ. ನಾವು 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದೇವೆ. ಬಿಜೆಪಿ ಸರ್ಕಾರವೂ ಬರೀ ಭರವಸೆಗಳನ್ನ ಮಾತ್ರ ನೀಡಿದೆ ಅಷ್ಟೇ. ಮಹಿಳೆಯರಿಗೆ ಉದ್ಯೋಗದಲ್ಲಿ 30% ಇತ್ತು ನಾವು ಶೇ.33ಕ್ಕೆ ತಂದಿದ್ದೇವೆ' ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.