ಮತ್ತೆ ಬಿಜೆಪಿಗೆ ಸಿಕ್ಕ ಲಿಂಗಾಯತ ಅಸ್ತ್ರ...ಚುನಾವಣೆ ಹೊಸ್ತಿಲಲ್ಲಿ ಎಡವಿದ ಟಗರು..?

Apr 24, 2023, 11:21 AM IST

ಕರ್ನಾಟಕದಲ್ಲಿ ಎಲೆಕ್ಷನ್ ಜ್ವರ. ಪಕ್ಷಗಳಿಗಂತೂ ಹೈ ಫೀವರ್. ಗೆಲುವು ಸೋಲಿನ ಲೆಕ್ಕಾಚಾರ ಈ ಸಮಯದಲ್ಲಿ ನಾಯಕರ ನಡೆ ಮತ್ತು ನುಡಿ ಅತ್ಯಂತ ಮುಖ್ಯವಾಗಿರುತ್ತೆ. ಒಂದೇ ಒಂದು ಮಾತು ಎದುರಾಳಿಗಳಿಗೆ ಅಸ್ತ್ರವಾಗಿ ಸಿಗಬಹುದು. ಈಗ ಇಂಥದ್ದೊಂದು ಸನ್ನಿವೇಶ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಂತಾ ಎನ್ನುವ ಚರ್ಚೆಗಳು ಶುರುವಾಗಿದೆ. ಯಾಕೆಂದ್ರೆ ಸಿದ್ರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆ ಆಡಿದ ಮಾತು ಹಾಗೂ ಟಿಪ್ಪು ಜಯಂತಿ ಬಗ್ಗೆ ಅವರ ಅಚ್ಚರಿಯ ನಿಲುವು. ಒಂದು ಹೇಳಿಕೆಯಿಂದ  ಬಹುತೇಕ ಎಲ್ಲಾ ಪ್ರಮುಖ ನಾಯಕರು ಕೂಡ ಸಿದ್ದು ವಿರುದ್ಧ  ತಿರುಗಿಬಿದ್ದಿದ್ದಾರೆ.  ರಾಹುಲ್ ಗಾಂಧಿ. ಮೋದಿ ಮತ್ತು  ಸಮುದಾಯದ ಬಗ್ಗೆ ಕೇವಲವಾಗಿ ಮಾತಾಡಿದಂತೆ ಈಗ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ಮಾತಾಡಿದ್ದಾರೆ ಇದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಇನ್ನು ಚುನಾವಣೆ ಸಮಯದಲ್ಲಿ ಇಂಥ ಮಾತುಗಳು ಅನೇಕ ಪರಿಣಾಮಗಳಿಗೆ ಕಾರಣವಾಗಬಹುದು. ಕಳೆದ ಚುನಾವಣೆಯಲ್ಲಿ 2018ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಕಾಂಗ್ರೆಸ್ ಹೋರಾಡಿತ್ತು. ಯಾಕೆಂದ್ರೆ ಲಿಂಗಾಯತ ಸಮುದಾಯ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಸಮುದಾಯವಾಗಿದೆ.