Jul 22, 2023, 10:39 PM IST
ಕಾಂಗ್ರೆಸ್ ಪ್ರಮುಖ ನಾಯಕ ಬಿಕೆ ಹರಿಪ್ರಸಾದ್ ಸಿಡಿಸಿದ ಗುಂಡು ಇದೀಗ ಕಾಂಗ್ರೆಸ್‌ನ್ನು ತಲ್ಲಣಗೊಳಿಸಿದೆ. ಮಂತ್ರಿ ಸ್ಥಾನ ಸಿಗದೆ ಬೇಸರಗೊಂಡಿರುವ ಬಿಕೆ ಹರಿಪ್ರಸಾದ್, ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಬೆಂಬಲ ಕೊಟ್ಟು ಅವರನ್ನು ಮುಖ್ಯಮಂತ್ರಿ ಮಾಡಿದ್ದೇವು. ಆದರೆ ನನಗೆ ರಾಜಕೀಯವಾಗಿ ಸಿದ್ದರಾಮಯ್ಯ ನೆರವು ನೀಡಲಿಲ್ಲ. ಕೋಟಿ ಚೆನ್ನೈಯ್ಯ ಪಾರ್ಕ್‌ಗೆ 5 ಕೋಟಿ ರೂಪಾಯಿ ನೀಡುತ್ತೇನೆ ಎಂದು ಹೇಳಿ ನೀಡಿಲ್ಲ. 5 ಮುಖ್ಯಮಂತ್ರಿಗಳನ್ನು ಮಾಡುವಲ್ಲಿ ನಾನು ಪ್ರಮುಖ ಪಾತ್ರನಿರ್ವಹಿಸಿದ್ದೇನೆ. ಸಿಎಂ ಮಾಡುವುದು ಗೊತ್ತು, ಇಳಿಸುವುದು ಗೊತ್ತು ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.