ಬಿಜೆಪಿಯಲ್ಲಿ ಬಣ ರಾಜಕೀಯ: ಶಿವರಾಮ್ ಹೆಬ್ಬಾರ್ ಅಸಮಾಧಾನ! Shivarama Hebbar on BJP | Suvarna News

Published : Feb 22, 2025, 07:01 PM IST

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕಾಗಿ ಬಣ ರಾಜಕೀಯ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಶಿರಸಿಯಲ್ಲಿ ಬಿಜೆಪಿ ರೆಬೆಲ್ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯಲ್ಲಿ ಎಷ್ಟು ಬಣಗಳಿವೆ ಎಂದು ಲೆಕ್ಕ ಮಾಡುತ್ತಿದ್ದೇನೆ, ಅಂಕೆ-ಸಂಖ್ಯೆ ಸಿಕ್ಕರೆ ಹೇಳುತ್ತೇನೆ. ಬಿಜೆಪಿಯ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ. ಸದ್ಯಕ್ಕೆ ಯಾವುದೇ ವಿವಾದಕ್ಕೆ ಬೀಳಬಾರದು ಎಂದು ಸುಮ್ಮನಿದ್ದೇನೆ. ಯಾರ್ಯಾರ ನಿಲುವು ಸರಿ, ಯಾರ್ಯಾರ ನಿಲುವು ತಪ್ಪು ಎನ್ನುವುದು ಇನ್ನು ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ. ನಾವು (ನಾನು ಮತ್ತು ಸೋಮಶೇಖರ್) ನಿರ್ಣಯ ತೆಗೆದುಕೊಂಡಾಗ ತಪ್ಪು ಎಂದು ಹೇಳಿದವರೇ ಈಗ ತಪ್ಪು ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಮತ್ತು ಯತ್ನಾಳ್ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ. ಶಾಸಕರ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಯ ಮೇಲೆ ಪರಿಣಾಮವಾಗಿತ್ತು, ಇದೀಗ ಎಲ್ಲಾ ಸರಿಯಾಗುತ್ತಿದೆ. ಸಮಾನತೆಯ ಸಮಾಜ ನಿರ್ಮಾಣವಾಗಬೇಕು, ಇದಕ್ಕೆ ಇಂತಹ ಯೋಜನೆ ಕೊಡುವುದು ಅನಿವಾರ್ಯ ಎಂದರು. ಗ್ಯಾರಂಟಿ ಟೀಕೆ ಮಾಡಿದ ಬಿಜೆಪಿ ಮುಂಬೈ, ದೆಹಲಿಯಲ್ಲಿ ಏನು ಮಾಡಿತು ಎಂದು ಪ್ರಶ್ನಿಸಿದ್ದಾರೆ. https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
Read more