* ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಚುನಾವಣೆ
* ಪ್ರಚಾರದ ಅಖಾಡಕ್ಕೆ ಧುಮುಕಿದ ಬೊಮ್ಮಾಯಿ-ಯಡಿಯೂರಪ್ಪ
* ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಸಿಎಂ ಬೊಮ್ಮಾಯಿಗೆ ಸೃಷ್ಟಿ
ಹಾನಗಲ್(ಅ.23): ಹಾನಗಲ್ ಉಪಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆ ಆಗಿರುವುದರಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಸಿಎಂ ಬೊಮ್ಮಾಯಿಗೆ ಸೃಷ್ಟಿಯಾಗಿದೆ. ಇಲ್ಲಿ ಬಹಳ ಪೈಪೋಟಿಯಿಂದ ಚುನಾವಣೆ ನಡೆಯುತ್ತಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಈಗಾಗಲೇ ಯಡಿಯೂರಪ್ಪ ಹಾನಗಲ್‌ನಲ್ಲಿ ಎರಡು ದಿನ ಪ್ರಚಾರ ಮಾಡಿದ್ದಾರೆ. ಬಿಎಸ್‌ವೈ, ಬೊಮ್ಮಾಯಿ ಜಂಟಿ ಪ್ರಚಾರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಅಲ್ಪ ಸಂಖ್ಯಾತ ಕಾರ್ಡ್ ಬಳಸಲು ಕಾಂಗ್ರೆಸ್ ಲೆಕ್ಕಾಚಾರ, ಮುಸ್ಲಿಂ ನಾಯಕರೇ ಉಲ್ಟಾ ಹೊಡೆದ್ರಾ