* ಹಿಜಾಬ್, ಹಲಾಲ್ ನಂತರ ಅಜಾನ್ ಮೈಕ್ ವಿಚಾರ
* ಅಲಾರಾಂ ಇಟ್ಟುಕೊಂಡು ಎದ್ದೇಳಬಹುದು
* ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ
* ಧ್ವನಿವರ್ಧಕ ಬಂದು ಸಾವಿರಾರು ವರ್ಷಗಳು ಕಳೆದಿಲ್ಲ
ನವದೆಹಲಿ(ಏ. 03) ಅಜಾನ್ (azaan) ಮೈಕ್ ಬ್ಯಾನ್ ವಿಚಾರದ ಬಗ್ಗೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಮಾತನಾಡಿದ್ದಾರೆ. ಅಜಾನ್ ಎನ್ನುವುದು ನಮಾಜ್ ಮಾಡಲಿಕ್ಕೆ ಬನ್ನಿ ಎನ್ನುವ ಕರೆ. ಧ್ವನಿವರ್ಧಕ ಶುರುವಾಗಿ ಬಹಳ ವರ್ಷಗಳಾಗಿಲ್ಲ ಎಂದಿದ್ದಾರೆ.
ಮಸೀದಿ ಮೈಕ್ ತೆರವು ಮಾಡಲ್ಲ, ಬೇಕಾದ್ರೆ ಸೌಂಡ್ ಕಡಿಮೆ ಮಾಡ್ತೀವಿ ಎಂದ ಕಾಂಗ್ರೆಸ್ ಶಾಸಕಿ
ತಂತ್ರಜ್ಞಾನ (Technology) ಮುಂದುವರಿದಿದೆ. ಅಲಾರಾಂ ಫಿಕ್ಸ್ ಮಾಡಿಕೊಂಡು ನಮಾಜ್ ಮಾಡಲು ತೆರಳಬಹುದು. ಎಲ್ಲರೂ ಅಲಾರಾಂ ಫಿಕ್ಸ್ ಮಾಡಿಕೊಂಡರೆ ಎಚ್ಚರವಾಗಿ ನಮಾಜ್ ಗೆ ಹೋಗಬಹುದು ಎಂದಿದ್ದಾರೆ