ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಆಗಸದಲ್ಲಿ ಆರ್ಭಟ ಶುರು ಮಾಡಿದ್ದಾರೆ.
ಪಠಾಣ್ ಕೋಟ್ [ಪಂಜಾಬ್], [ ಸೆ.02]: ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್, ಮತ್ತೆ ಆಗಸದಲ್ಲಿ ಆರ್ಭಟ ಶುರು ಮಾಡಿದ್ದಾರೆ. ಇಂದು [ಸೋಮವಾರ] ಮಿಗ್ -21 ಹಾರಾಟ ನಡೆಸಿದರು. ಈ ಬಾರಿ ಅವರು ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರೊಂದಿಗೆ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.