Isthiyakh S | Published: Apr 7, 2025, 2:00 PM IST
ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವದ ಎಚ್ಚರಿಕೆ: 'ಶತ್ರುಗಳಿಂದ ನಿನ್ನ ಸಂಸಾರ ಹಾಳು ಮಾಡಲು ಯತ್ನ'! ಕಾಂತಾರ ನಟ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವದಿಂದ ಎಚ್ಚರಿಕೆ ನೀಡಲಾಗಿದೆ. ಜಗತ್ತಿನಲ್ಲಿ ಶತ್ರುಗಳಿದ್ದು, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ದೈವವು ಹೇಳಿದೆ. ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್ ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ' ಎಂದು ಪಂಜುರ್ಲಿ ದೈವದಿಂದ ಕಾಂತಾರ ಸಿನಿಮಾ ನಟ ರಿಷನ್ ಶೆಟ್ಟಿಗೆ ಎಚ್ಚರಿಕೆಯನ್ನು ನೀಡಿದೆ.