Jul 7, 2019, 7:51 PM IST
ಜಲಪಾತದ ಮಧ್ಯೆ ಸಿಲುಕಿದ್ದ 8 ಮಂದಿ ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೊಡಗು ಜಿಲ್ಲೆಯ ಮಲ್ಲಳ್ಳಿ ಫಾಲ್ಸ್ ಮಧ್ಯದ ಕಲ್ಲು ಬಂಡೆ ಬಳಿ ತೆರಳಿದ್ದ ಯುವಕರ ತಂಡ ವಾಪಸಾಗಲು ಸಾಧ್ಯವಾಗದೆ ಸಿಕ್ಕಿಹಾಕಿಕೊಂಡಿತ್ತು. ಸೋಮವಾರಪೇಟೆ ತಾಲೂಕಿನಲ್ಲಿರುವ ಜಲಪಾತ ಮಳೆಯಿಂದ ಮೈದುಂಬಿದೆ. ಫಾಲ್ಸ್‌ನ ನಡುವೆ ನಿಂತು ಸಹಾಯಕ್ಕೆ ಮೊರೆಯಿಟ್ಟ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವವರು ಎಚ್ಚರಿಕೆಯಿಂದ ಇರುವುದು ಒಳಿತು.