ಸಿನಿಮೀಯ ಶೈಲಿಯಲ್ಲಿ ಚಲಿಸುವ ರೈಲಿನ ಅಡಿಯಲ್ಲಿ ಮಲಗಿದ ವ್ಯಕ್ತಿ! ಆಮೇಲೆ ಆಗಿದ್ದೇನು? ವಿಡಿಯೋ ವೈರಲ್

Dec 25, 2024, 5:15 PM IST

ಕೇರಳದ ಕಣ್ಣೂರಿನ ಪನ್ನೆನ್‌ ಪಾರಾದಲ್ಲಿ ವ್ಯಕ್ತಿಯೊಬ್ಬ ಪವಾಡಸದೃಶ ರೀತಿಯಲ್ಲಿ ರೈಲು ದುರಂತದಿಂದ ಪಾರಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ರೈಲಿನ ಹಳಿಯ ಮೇಲೆ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ. ಈ ವೇಳೆ ಸಡನ್ ಆಗಿ ಬಂದ ರೈಲು, ಇತ್ತ ಗೊಂದಲಕ್ಕೀಡಾದ ವ್ಯಕ್ತಿ;  ರೈಲು ಸಮೀಪಿಸುತ್ತಿದ್ದಂತೆಯೇ ಹಳಿಗಳ ಮೇಲೆ ಅಡ್ಡ ಮಲಗಿ ಸೇಫ್ ಆಗಿದ್ದಾನೆ. ಇನ್ನು ರೈಲು ಮುಂದಕ್ಕೆ ಹೋಗ್ತಿದ್ದಂತೆ ಹಳಿಯಿಂದ ಎದ್ದು ಹೋದ ವ್ಯಕ್ತಿ; ಘಟನೆಯನ್ನು ಕಣ್ಣಾರೆ ಕಂಡ  ಸ್ಥಳೀಯ ನಿವಾಸಿ ಶ್ರೀಜಿತ್‌ನಿಂಡ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ