ಬೆಂಗಳೂರು (ಜು.12): ಕಾಂಗ್ರೆಸ್ನಿಂದ ಬೇಸರಗೊಂಡಿರುವ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೌಮ್ಯಾ ರೆಡ್ಡಿ, ರಾಜೀನಾಮೆ ಬಗ್ಗೆ ತೀರ್ಮಾನ ಮಾಡಿಲ್ಲ, ರಾಮಲಿಂಗ ರೆಡ್ಡಿಯವರೂ ರಾಜೀನಾಮೆ ನೀಡುವಂತೆ ಹೇಳಿಲ್ಲ, ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಪಕ್ಷದ ಮೇಲಿನ ಬೇಸರ ಏಕೆ, ಮೈತ್ರಿ ಸರ್ಕಾರದ ಮೇಲೆ ಸಿಟ್ಟೇಕೆ? ಎಂಬುವುದನ್ನೂ ಬಿಚ್ಚಿಟ್ಟರು.