ನವದೆಹಲಿ (ಜೂ. 19): ಪಕ್ಷದ ಪ್ರಭಾವಿ ನಾಯಕ ರೋಷನ್ ಬೇಗ್ರನ್ನು ಕಾಂಗ್ರೆಸ್ ಅಮಾನತ್ತು ಮಾಡಿದೆ. ರೋಷನ್ ಬೇಗ್ ವಿರುದ್ಧ ಶಿಸ್ತಿನ ಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಮರ್ಥಿಸಿಕೊಂಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಿಕೊಳ್ಳಲ್ಲ, ಪಕ್ಷ ಜಾರಿ ಮಾಡಿದ ನೋಟಿಸ್ಗೂ ಬೇಗ್ಗೆ ಉತ್ತರಿಸಿಲ್ಲ. ಹೈಕಮಾಂಡ್ ಸೂಕ್ತ ಕ್ರಮ ಕೈಗೊಂಡಿದೆ, ಎಂದು ಹೇಳಿದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕಾರಣ ನೀಡಿ ರೋಷನ್ ಬೇಗ್ರನ್ನು ಕಾಂಗ್ರೆಸ್ ಪಕ್ಷವು ಮಂಗಳವಾರ ಅಮಾನತ್ತು ಮಾಡಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ, ರೋಷನ್ ಬೇಗ್ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು.