ಈಗಾಗಲೇ ಹಲವು ಬಾರಿ ನಮಗೆ ಬೆದರಿಕೆ ಪತ್ರಗಳು ಬಂದಿವೆ. ಈಗ ಮತ್ತೊಮ್ಮೆ ಇದು ಪುನರಾವರ್ತನೆಯಾಗಿದ್ದರಿಂದ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿಕಕೊಂಡಿದ್ದಾಗಿ ಆನಂದ್ ಗುರೂಜಿ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.
ಬೆಂಗಳೂರು(ಜೂ.10): ನಗರದ ಖ್ಯಾತ ಜೋತಿಷಿ ಆನಂದ್ ಗುರೂಜಿಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಪತ್ರ ಬಂದಿದ್ದು, ಸೂಕ್ತ ಭದ್ರತೆ ನೀಡಿ ಎಂದು ಮುಖ್ಯಮಂತ್ರಿಗೆ ಆನಂದ್ ಗುರೂಜಿ ಮನವಿ ಮಾಡಿಕೊಂಡಿದ್ದಾರೆ.
ಆನಂದ್ ಗುರೂಜಿಗೆ ಧರ್ಮ, ಸಂಸ್ಕೃತಿ, ಗೋವುಗಳ ಬಗ್ಗೆ ಹೆಚ್ಚು ಮಾತನಾಡುತ್ತೀರಿ. ಬಹಳ ಓಡಾಡುತ್ತಿದ್ದೀರ, ಎಚ್ಚರಿಕೆಯಿಂದಿರಿ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಬೆದರಿಕೆಯೊಡ್ಡಿದ್ದಾರೆ.
ಈಗಾಗಲೇ ಹಲವು ಬಾರಿ ನಮಗೆ ಬೆದರಿಕೆ ಪತ್ರಗಳು ಬಂದಿವೆ. ಈಗ ಮತ್ತೊಮ್ಮೆ ಇದು ಪುನರಾವರ್ತನೆಯಾಗಿದ್ದರಿಂದ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿಕಕೊಂಡಿದ್ದಾಗಿ ಆನಂದ್ ಗುರೂಜಿ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.
ತಮ್ಮ ಮನೆಯ ಸುತ್ತ ನಡೆದಿರುವ ಸಾಕಷ್ಟು ಅಹಿತಕರ ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.