
ಡಿಕೆ ಶಿವಕುಮಾರ್ ಕರಾವಳಿಗೆ 30 ದಿನಗಳಲ್ಲಿ ಮೂರನೇ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನು ಮರಳಿ ಪಡೆಯಲು ಡಿಕೆಶಿ ನಿಗೂಢ ವ್ಯೂಹ ರಚಿಸಿದ್ದಾರೆ. ಬಿಜೆಪಿಯ ಹಿಂದೂತ್ವ ಅಸ್ತ್ರಕ್ಕೆ ಪ್ರತಿಯಾಗಿ ಸಾಫ್ಟ್ ಹಿಂದೂತ್ವ ಪ್ರತ್ಯಸ್ತ್ರ ಹೂಡಿದ್ದಾರೆ.
ಬೆಂಗಳೂರು (ಏ.21): ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ಅದೆಷ್ಟೆಷ್ಟು ಸಂಗತಿಗಳು ನಡೀತಿವೆ. ಒಂದರ ಕಡೆ ಗಮನ ಹರಿಸೋದ್ರಲ್ಲಿ ಮತ್ತೊಂದು ಘಟನೆ, ಅಚ್ಚರಿ ಮೂಡಿಸೋ ಮಟ್ಟಕ್ಕೆ ನಡೀತಿದೆ.
ಇಂಥಾ ಅಚ್ಚರಿಗಳ ಪೈಕಿ, ಅತ್ಯಂತ ಮಹತ್ವದ್ದು ಅನ್ನಿಸಿಕೊಳ್ತಿರೋ ಸಂಗತಿ ಒಂದಿದೆ. ಒಂದು ಕಾಲದಲ್ಲಿ ಯಾವುದು ಕಾಂಗ್ರೆಸ್ ಭದ್ರಕೋಟೆಯಾಗಿತ್ತೋ? ಯಾವ ಭದ್ರಕೋಟೆಯಲ್ಲಿ ತನ್ನ ಅಸ್ತಿತ್ವವೇ ಮಾಯವಾಗೋ ಭೀತಿ ಹುಟ್ಟಿಕೊಂಡಿತ್ತೋ, ಅದೇ ಭದ್ರಕೋಟೆಯಲ್ಲಿ ನಿಂತು ವಿಜಯಧ್ವಜ ಹಾರಿಸೋಕೆ, ಕಾಂಗ್ರೆಸ್ ಕಟ್ಟಾಳು ಡಿಕೆ ಶಿವಕುಮಾರ್ ಸರ್ವಸನ್ನದ್ಧರಾಗಿದ್ದಾರೆ.
ಮುಂದಿನ ಚುನಾವಣೆಯಲ್ಲಿ ತುಳುನಾಡಿನಿಂದ 10 ಮಂದಿ ಕಾಂಗ್ರೆಸ್ ಶಾಸಕರು: ಡಿಕೆ ಶಿವಕುಮಾರ
ಹೌದು ಕರಾವಳಿ ಭಾಗಕ್ಕೆ ಕಳೆದ 30 ದಿನಗಳಲ್ಲಿ ಮೂರನೇ ಬಾರಿಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಕರಾವಳಿ ಕೈವಶ ಮಾಡಿಕೊಳ್ಳೋಕೆ ಡಿಕೆ ನಿಗೂಢ ವ್ಯೂಹ ರಚಿಸಿದ್ದಾರೆ. ಬಿಜೆಪಿ ಹಿಂದೂತ್ವ ಅಸ್ತ್ರಕ್ಕೆ, ಡಿಕೆ ಸಾಫ್ಟ್ ಹಿಂದೂತ್ವ ಪ್ರತ್ಯಸ್ತ್ರ ಹೂಡಿದ್ದಾರೆ. ಪಕ್ಷದೊಳಗೆ ಗಣತಿ ಯುದ್ಧ ನಡೆಯುತ್ತಿದ್ದರೆ, ಕರಾವಳಿಯಲ್ಲಿ ಮರ್ಮಯುದ್ಧ ನಡೆಯುತ್ತಿದೆ.