Sep 21, 2019, 11:54 AM IST
ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ನಿನ್ನೆ ರಾತ್ರಿ ಇಳಕಲ್ ಪಟ್ಟಣದಲ್ಲಿ ಸರ್ಕಾರಿ ಬಸ್ ಏರಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಇಂದು ಬೆಳಗ್ಗೆ ಮೆಜೆಸ್ಟಿಕ್ ಗೆ ಬಂದಿಳಿದರು. ಅವರೊಂದಿಗೆ ಇಬ್ಬರು ಗನ್ ಮ್ಯಾನ್, ಓರ್ವ ಆಪ್ತಸಹಾಯಕ ಇದ್ದರು. ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ವಿಮಾನ ಮೂಲಕ ಹುಬ್ಬಳ್ಳಿಗೆ ಹೋಗಿ ಗದಗ, ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ಅರ್ಜೆಂಟ್ ಬೆಂಗಳೂರಿಗೆ ತೆರಳಬೇಕಿದ್ದರಿಂದ ಸರ್ಕಾರಿ ಕಾರು ಬಿಟ್ಟು ಸರ್ಕಾರಿ ಬಸ್ ಏರಿ ಸರಳತೆ ಮೆರೆದರು.