News hour: ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ದಾಳ: ಕುಮಾರಸ್ವಾಮಿಗೆ ಚೆಕ್‌ ಇಟ್ಟ ಡಿಕೆಶಿವಕುಮಾರ್

News hour: ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ದಾಳ: ಕುಮಾರಸ್ವಾಮಿಗೆ ಚೆಕ್‌ ಇಟ್ಟ ಡಿಕೆಶಿವಕುಮಾರ್

Published : Jan 21, 2023, 11:17 PM IST

ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್‌ ಚದುರಂಗದಾಟ
ಕಾಂಗ್ರೆಸ್‌ ಪ್ರಜಾಧ್ವನಿಯಾತ್ರೆಗೆ ಜೆಡಿಎಸ್‌ ಪಾಳಯದಲ್ಲಿ ನಡುಕ ಶುರು
ತೆಲಂಗಾಣ ಸಿಎಂ ಕೆಸಿಆರ್‌ ಭೇಟಿಯಾಗಿ ಡೀಲ್‌ ಪಡೆದುಕೊಂಡರೇ ಜಮೀರ್‌ ಅಹಮದ್‌
ಕೋಲಾರದಲ್ಲಿ ಸಿದ್ದರಾಮ್ಯ ಸೋಲಿಸುವಂತೆ ಕರಪತ್ರ ಅಭಿಯಾನ
 

ಬೆಂಗಳೂರು (ಜ.21): ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ತವರಿನಲ್ಲಿ ಕಾಂಗ್ರೆಸ್‌ ರಣಕಹಳೆಯನ್ನು ಆರಂಭಿಸಿದೆ. ಕಾಂಗ್ರೆಸ್‌ನಿಂದ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಆರಂಭಿಸಿದೆ. ದಿನಕ್ಕೆ 2 ದೊಡ್ಡ ನಗರಗಳನ್ನು ಕವರ್‌ ಮಾಡುತ್ತಿದ್ದು, ತನ್ನ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಸನದಲ್ಲಿ ಅದ್ಧೂರಿಯಾಗಿ ಸಮಾವೇಶ ನಡೆಯಿತು. ಸೇಬಿನ ಹಾರ, ಹೂವಿನ ಹಾರ, ಮಹಿಳೆಯರಿಂದ ಕುಂಭವನ್ನು ಹಿಡಿದು ಸ್ವಾಗತಿಸಿದರು. ಇನ್ನು ವೇದಿಕೆಯಲ್ಲಿ 'ಸಿದ್ಧರಾಮಯ್ಯ ಹಿಡಿದ ಬಡವರ ಕೈಯಾ' ಎಂಬ ಹಾಡು ಹಾಡುವುದನ್ನು ತಡೆದ ಸಂಸದ ಡಿ.ಕೆ. ಶಿವಕುಮಾರ್‌ ದೊಡ್ಡ ಸಮಾವೇಶದಲ್ಲಿ ವ್ಯಕ್ತಿ ಪೂಜೆ ಬೇಡವೆಂದು ತಿಳಿಸಿದರು. 

ಮಂಡ್ಯದಲ್ಲಿ ಗರಿಗೆದರಿದ ಕಾಂಗ್ರೆಸ್‌ ರಾಜಕೀಯ: ಜೆಡಿಎಸ್‌ನಿಂದ ಹೊರದೂಡಲ್ಪಟ್ಟ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಹೋದರನ ಮಗ ಮದ್ದೂರು ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಆಗಿರುವ ಗುರುಚರಣ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದರು. ಅಲ್ಲಿ ಶಿವರಾಮೇಗೌಡ ಅವರನ್ನು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಮತ್ತು ಅಲ್ಲಿನ ಚಲುವರಾಯಸ್ವಾಮಿ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ. ಇನ್ನು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸ್ಪರ್ಧೆ ಮಾಡುವಂತೆ ಗುರುಚರಣ್‌ ಮನವಿ ಮಾಡಿದ್ದಾರೆ.

Assembly election: ಕಾಂಗ್ರೆಸ್‌ ಸೋಲಿಸಲು ತೆಲಂಗಾಣ ಸಿಎಂ 500 ಆಫರ್‌: ಖೆಡ್ಡಾಕ್ಕೆ ಬಿದ್ರಾ ಜಮೀರ್ ಅಹಮದ್‌

ಕೋಲಾರದಲ್ಲಿ ಸಿದ್ದು ವಿರೋಧಿಸಿ ಕರಪತ್ರ: ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರು ದಲಿತ ವಿರೋಧಿಗಳು ಆಗಿದ್ದಾರೆ. ದಲಿತ ನಾಯಕ ಪರಮೇಶ್ವರ ಅವರನ್ನು ಸೋಲಿಸಿ ಮುಖ್ಯಮಂತ್ರಿ ಆಗುವುದನ್ನು ತಡೆದಿದ್ದಾರೆ. ಸ್ವಾಭಿಮಾನಿ ಕೋಲಾರದ ಜನರು ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು. ದಲಿತ ವಿರೋಧಿ ಮನುಷ್ಯನ್ನು ಸೋಲಿಸುವ ಮೂಲಕ ಅವರ ಹುಟ್ಟೂರು ಸಿದ್ಧರಾಮನ ಹುಂಡಿಗೆ ಕಳುಹಿಸಬೇಕು. 

ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ತಮ್ಮ ಪಕ್ಷವನ್ನು ಭಾರತ ರಾಷ್ಟ್ರ ಸಮಿತಿ ಪಕ್ಷವನ್ನು ಕಟ್ಟಿ ಜೆಡಿಎಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‌ ಮುಖಂಡರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್‌ನ 25-30 ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು 500 ರೂ. ಹಣವನ್ನು ಕೊಡಲಾಗಿದೆ. ಇತ್ತೀಚೆಗಷ್ಟೇ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅವರು, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರನ್ನು ಭೇಟಿ ಮಾಡಿದ್ದರು. ಈಗ ಅವರ ಮೇಲೆಯೇ ನೇರ ಆರೋಪ ಕೇಳಿಬಂದಿದೆ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
Read more