Jan 11, 2025, 3:29 PM IST
ಬೆಂಗಳೂರು: ಅದು ಚಿಕ್ಕ ಕುಟುಂಬ. ಗಂಡ ಹೋಮ್ ಗಾರ್ಡ್ ಆಗಿದ್ರೆ ಹೆಂಡತಿ ಗಾರ್ಮೆಂಟ್ಸ್ನಲ್ಲಿ ಕೆಲಸ. ಮಗಳು ತುಮಕೂರಿನಲ್ಲಿ ಡಿಗ್ರಿ ಓದುತ್ತಿದ್ದಳು. ಮನೆಯಲ್ಲಿ ಕಷ್ಟವಿದ್ರೂ ನೆಮ್ಮದಿಯಿಂದ ಜೀವನ ಮಾಡ್ತಿದ್ದ ಕುಟುಂಬವದು. ಆದ್ರೆ ಆವತ್ತೊಂದು ದಿನ ಓಂ ಶಕ್ತಿ ಮಾಲೆ ಹಾಕಬೇಕು ಅಂತ ಹೆಂಡತಿಯೇ ಮಗಳು ಮತ್ತು ಅಕ್ಕನ ಮಗಳನ್ನ ಮನೆಗೆ ಕರೆಸಿಕೊಂಡಿದ್ಲು. ಆದ್ರೆ ಇನ್ನೇನು ಮಾಲೆ ಹಾಕಬೇಕು. ಕೆಲಸದಿಂದ ಬಂದ ಗಂಡ ಹೆಂಡತಿ, ಮಗಳು ಮತ್ತು ಹೆಂಡತಿಯ ಅಕ್ಕನ ಮಗಳನ್ನ ಕೊಂದು ಮುಗಿಸಿದ್ದ.
ಒಂದೇ ಏಟಲ್ಲಿ ಮೂರು ಹೆಣಗಳನ್ನ ಹಾಕಿದ್ದ. ಅಷ್ಟಕ್ಕೂ ಆತ ಅಷ್ಟು ಕ್ರೂರವಾಗಿ ತನ್ನ ಹೆಂಡತಿ ಮಗಳನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಅವರು ಮಾಡಿದ್ದೇನು? ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಜಾಲಹಳ್ಳಿ ಕ್ರಾಸ್ ತ್ರಿಬಲ್ ಮರ್ಡರ್ ಕೇಸ್ನ ಕಂಪ್ಲೀಟ್ ಕಹನಿಯೇ ಇವತ್ತಿನ ಎಫ್.ಐ.ಆರ್