
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ರಾಜ್ಯದ ರೈತರನ್ನು ಮಾತ್ರವಲ್ದೆ, ದೇಶದ ಮೂಲೆ ಮೂಲೆಯ ರೈತ್ರನ್ನು ತನ್ನತ್ತ ಸೆಳೆಯುತ್ತದೆ. ಹಾಗಂತ ಇಲ್ಲಿಗೆ ರೈತ್ರು ಮಾತ್ರಾನೇ ಬರೋದಿಲ್ಲ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರ್ತಾರೆ. ಇನ್ನು ಕುಟುಂಬದ ಸಮೇತ ಬರೋ ಜನ್ರು ಕೂಡ ಇದ್ದಾರೆ. ವರ್ಷದಿಂದ ವರ್ಷಕ್ಕೆ ಈ ಮೇಳದ ಕ್ರೇಜ್ ಜಾಸ್ತಿಯಾಗ್ತಾನೆ ಇದೆ. ಇದಕ್ಕೆ ಕಾರಣವಾಗಿರೋದು ಅಷ್ಟು ಅಚ್ಚುಕಾಟ್ಟಾದ ಆಯೋಜನೆ ಮತ್ತೆ ಮೇಳದಲ್ಲಿ ಸಿಗೋ ಅಗಣಿತವಾದ ಮಾಹಿತಿ. ಕೃಷಿಗೆ ಸಂಬಂಧಿಸಿದ್ದು ಇಲ್ಲಿ ಏನಿಲ್ಲ ಅಂತ ಕೇಳಬೇಕು ಅಷ್ಟೆ. ಎಲ್ಲವೂ ಇರುತ್ತೆ. ಈ ಸಲದ ಹೈಲೈಟ್ಗಳು ಏನು ಅನ್ನೋದು ಇಲ್ಲಿದೆ ನೋಡಿ.
ಕೃಷಿ ಮೇಳ ಅಂದ್ರೆ, ಅಲ್ಲಿ ಜಾನುವಾರುಗಳು ಇಲ್ದಿದ್ರೆ ಹೇಗೆ ಅಲ್ವಾ? ಜಿಕೆವಿಕೆ ಮೈದಾನದ ಕಳೆ ಹೆಚ್ಚಿಸೋದೆ ಜಾನುವಾರುಗಳು. ಈ ಸಲವಂತೂ ನಮ್ಮ ದೇಸಿ ಜಾನುವಾರುಗಳ ಜೊತೆ, ವೆರೈಟಿ ವೆರೈಟಿ ಪ್ರಾಣಿಗಳು ಬಂದಿವೆ. ಯಾವ್ದನ್ನ ನೋಡ್ತಿರಾ? ಯಾವುದನ್ನ ಬಿಡ್ತೀರಾ? .. ಅದ್ರಲ್ಲಿ ಸಾಕಷ್ಟು ಗಮನ ಸೆಳೆದ ಕೆಲವೊಂದು ಜಾನುವಾರುಗಳು ಇಲ್ಲಿವೆ ನೋಡಿ.