Shriram Bhat | Updated: Mar 30, 2025, 7:33 PM IST
ನಟ ದರ್ಶನ್ (Darshan Thoogudeepa) ವಾಮನ ಟ್ರೈಲರ್ ಬಗ್ಗೆ ಮತನಾಡ್ತಾ ಒಂದಿಷ್ಟು ವಿಚಾರಗಳನ್ನ ಮಾತನಾಡಿದ್ದಾರೆ. ಇಂಡಸ್ಟ್ರಿ ಬಗ್ಗೆ.. ಸಿನಿಮಾಗಳ ಬಗ್ಗೆ.. ಪ್ಯಾನ್ ಇಂಡಿಯಾ ಕಲ್ಚರ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜನ ಕನ್ನಡ ಸಿನಿಮಾ ನೋಡದೇ ಹೋದ್ರೆ ಹಸು ಕಾಯ್ಕೊಂಡು ಇದ್ದು ಬಿಡ್ತಿನಿ ಅಂದಿದ್ದಾರೆ. ದರ್ಶನ್ರ ಈ ಮಾತುಗಳ ಹಿಂದೆ ಒಂದು ವಿಶೇಷವಾದ ಅರ್ಥ ಇದೆ..? ಏನದು ಈ ಸ್ಟೋರಿ ನೋಡಿ..
ಹೌದು, ನಟ ದರ್ಶನ್ ಮತ್ತೆ ಹಸು ಸಾಕಿ ಹಾಲು ಕರೆದುಕೊಂಡು ಇದ್ದು ಬಿಡ್ತಿನಿ ಅಂದಿದ್ದಾರೆ. ನಿಮಗೆಲ್ಲಾ ಗೊತ್ತಿರೋ ಹಾಗೆ ದರ್ಶನ್ ಇವತ್ತು ಕೋಟಿ ಕೋಟಿ ಸಂಭಾವನೆ ಪಡೆವ ಸ್ಟಾರ್. ತಮ್ಮ ವೃತ್ತಿ ಜೀವನ ಬೆಳವಣಿಗೆ ಹಂತದಲ್ಲಿದ್ದಾಗಲೇ ದರ್ಶನ್ ತಮ್ಮದೇ ಆದ ತೋಟ, ಫಾರಂ ಹೌಸ್ ಮಾಡಿಕೊಂಡಿದ್ದಾರೆ.
ಛೀಮಾರಿ ಹಾಕಿದ್ಮೇಲೆ ಎಚ್ಚೆತ್ತುಕೊಂಡ ರಶ್ಮಿಕಾ ಮಂದಣ್ಣ; ಈಗ ಬಂತು ನೋಡಿ ಕನ್ನಡದ ಮೇಲೆ ಪ್ರೀತಿ!
ತೋಟದಲ್ಲಿ ಒಂದಿಷ್ಟು ಬೆಳೆ ಬೆಳೆಯೋದ್ರ ಜೊತೆಗೆ ಪಶು ಪಾಲನೆ ಕೂಡ ಮಾಡ್ತಾ ಇದ್ದಾರೆ. ಕೋಳಿ, ಕುರಿ, ಹಸುಗಳ ಸಾಕಾಣಿಕೆ ಮಾಡ್ತಾ ಇದ್ದಾರೆ. ಒಂದಿಷ್ಟು ಕುದುರೆ ಪಕ್ಷಿಗಳು ಎಲ್ಲಕ್ಕೂ ಆಸರೆ ಕೊಟ್ಟಿದ್ದಾರೆ. ಈಗಲೂ ಬೇಸರ ಆದಾಗೆಲ್ಲಾ ಅಲ್ಲಿಗೆ ಹೋಗಿ ನೆಮ್ಮದಿಯಿಂದ ಇದ್ದು ಬಿಡ್ತಾರೆ.
ಇವತ್ತಿಗೆ ಸಿನಿಮಾ ಮಾಡೋದು ಬಿಟ್ಟರೂ ದರ್ಶನ್ ತಮ್ಮ ಸೇವಿಂಗ್ಸ್, ತೋಟದ ಆದಾಯದಿಂದ ನೆಮ್ಮದಿಯಾಗಿ ಜೀವನ ಮಾಡಬಹುದು. ಅಷ್ಟೆಲ್ಲಾ ಯಾಕೆ ಈ ತೋಟ, ಇಷ್ಟೆಲ್ಲಾ ಹಣ, ಹೆಸರು ಇಲ್ಲದ ಕಾಲದಲ್ಲೂ ದರ್ಶನ್ ಮೈಸೂರಿನಲ್ಲಿ ಹಸು ಸಾಕಿ, ಹಾಲು ಮಾಡಿಕೊಂಡು ಜೀವನ ಮಾಡಿದ್ರು.
ಹೌದು ದರ್ಶನ್ ನಿನಾಸಂಗೆ ಹೋಗಿ ನಟನೆ ಕಲಿತು ಸಿನಿಮಾ ರಂಗಕ್ಕೆ ಎಂಟ್ರಿ ಏನೋ ಕೊಟ್ರು. ಆದ್ರೆ ಆರಂಭದಲ್ಲಿ ದರ್ಶನ್ಗೆ ನಿರೀಕ್ಷೆಗೆ ತಕ್ಕಂತೆ ಅವಕಾಶಗಳು ಸಿಗಲಿಲ್ಲ. ಲೈಟ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕಷ್ಟಪಟ್ಟ ದರ್ಶನ್, ಬಳಿಕ ಬೇಸರಕೊಂಡು ಈ ಸಿನಿಮಾ ಸಹವಾಸ ಸಾಕು ಅಂದುಕೊಡು ವಾಪಾಸ್ ಮೈಸೂರಿಗೆ ಹೋಗಿದ್ರು. ಅಲ್ಲಿ ಹಸು ಸಾಕಿ ಹಾಲು ಮಾರಿಕೊಂಡು ಜೀವನ ಮಾಡಿದ್ರು.
ಸಲ್ಮಾನ್ ಖಾನ್ ಪರಿಸ್ಥಿತಿ ಡಾ ರಾಜ್‌ಕುಮಾರ್‌ಗೂ ಬಂದಿತ್ತು; ಆದ್ರೆ ಅಣ್ಣಾವ್ರು ಕೊಟ್ಟ ಪ್ರತಿಕ್ರಿಯೆ ಹೇಗಿತ್ತು?
ಆ ಬಳಿಕ ದರ್ಶನ್ಗೆ ಮೆಜೆಸ್ಟಿಕ್ ಸಿನಿಮಾದ ಅವಕಾಶ ಬಂತು. ನಾಯಕನಟನಾಗಿ ಮಾಡಿದ ಮೊದಲ ಚಿತ್ರವೇ ಹಿಟ್ ಆಯ್ತು., ಬದುಕು ಬದಲಾಯ್ತು.. ಮುಂದೇ ಏನೇನಾಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ಈ ಟೈಂನಲ್ಲಿ ದರ್ಶನ್ ಯಾಕೆ ಮತ್ತೆ ಹಸು ಸಾಕುವ ಮಾತನಾಡಿದ್ರು ಅಂದ್ರೆ ಅದರ ಹಿಂದೆಯೂ ಒಂದು ಕಾರಣವಿದೆ.. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ..