ಫೋಟೋ ಫ್ಲ್ಯಾಶ್‌ಗೆ ಬೆದರಿದ ಅಂಬಾರಿ ಹೊತ್ತಿದ್ದ ಅರ್ಜುನ!

Oct 9, 2019, 12:54 PM IST

ಮೈಸೂರು[ಅ.09]: ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಮುಗಿದಿದೆ. ಆದ್ರೆ, ನಿನ್ನೆ ಅಂಬಾರಿ ಕಟ್ಟುವ ವೇಳೆ ವ್ಯಕ್ತಿಯೊಬ್ಬ ಫೋಟೋ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಅರ್ಜುನ ತಬ್ಬಿಬ್ಬು ಗೊಂಡು ಅತ್ತಿತ್ತ ಜರುಗಾಡಿದ್ದಾನೆ. ಇದರ ಪರಿಣಾಮ ಅಂಬಾರಿ ಸ್ವಲ್ಪ ಬಲಕ್ಕೆ ವಾಲಿತ್ತು. ಬಲಶಾಲಿ ಅರ್ಜುನ ಇದ್ಯಾವುದನ್ನು ಲೆಕ್ಕಿಸದೆ ಅಂಬಾರಿ ಹೊತ್ತು ಮೂರೂವರೆ ಕಿ.ಮೀ.ಯಶಸ್ವಿಯಾಗಿ ಸಾಗಿದ್ದಾನೆ.

ಸಾಮಾನ್ಯವಾಗಿ ಅಂಬಾರಿ ಎಡಕ್ಕೆ ಇಲ್ಲವೇ ಬಲಕ್ಕೆ ವಾಲದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಯಾಕೆಂದರೆ ಅಂಬಾರಿ ಕೊಂಚ ಒಂದು ಕಡೆ ವಾಲಿದರೂ ಆನೆಗೆ ಒಂದೇ ಕಡೆ ಭಾರ ಬೀಳುತ್ತೆ. ನಾಲ್ಕೂವರೆ ಕಿ.ಮೀ. 750 ಕೆಜಿ ಅಂಬಾರಿ ಹೊತ್ತು ಸಾಗುವುದು ಕಷ್ಟವಾಗುತ್ತದೆ. ನಿನ್ನೆ ಅಂಬಾರಿಯನ್ನು ಆನೆ ಬೆನ್ನಿಗೆ ಹಗ್ಗಗಳಿಂದ ಬಿಗಿಯುವಾಗ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಆನೆಯ ಮುಂದೆ ಬಂದು ಫೋಟೊ ತೆಗೆಯಲು ಆರಂಭಿಸಿದ.

ಈ ಸಂದರ್ಭದಲ್ಲಿ ಕ್ಯಾಮೆರಾ ಫ್ಲಾಶ್‌ ಲೈಟ್‌ನಿಂದ ತಬ್ಬಿಬ್ಬುಗೊಂಡ ಅರ್ಜುನ ಕೊಂಚ ಅತ್ತಿತ್ತ ಜರುಗಾಡಿದ್ದಾನೆ. ಆಗ ಮಾವುತರು ಹಗ್ಗ ಬಿಗಿಯುವಲ್ಲಿಕೊಂಚ ವ್ಯತ್ಯಾಸವಾಯಿತು. ಹಾಗಾಗಿ ಅಂಬಾರಿ ಬಲಕ್ಕೆ ವಾಲುವಂತಾಯಿತು. 

ಹೇಗಿತ್ತು ನಾಡಹಬ್ಬ ದಸರಾ? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ