Aug 5, 2023, 12:39 PM IST
ಚಿತ್ರದುರ್ಗ: ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ಪೂರೈಸಿದ್ದಕ್ಕೆ ಚಿತ್ರದುರ್ಗ (Chitradurga) ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ(MLA Veerendra Puppy) ಆಕ್ರೋಶವನ್ನು ಹೊರಹಾಕಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ (Protest) ವೇಳೆ ಭೇಟಿ ನೀಡಿದ್ದ ಅವರು, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಈ ವೇಳೆ ಮಾತನಾಡಿದ ಅವರು, ಕೊಳೆತ ಆಹಾರವನ್ನೇ ವಾರ್ಡನ್‌ಗೆ ತಿನ್ನಿಸಿ, ಅವರಿಗೆ ಹೊಡೆಯಿರಿ. ನಾನು ನಿಮ್ಮ ಜೊತೆ ಇರ್ತಿನಿ ಎಂದು ಹೇಳಿಕೆ ನೀಡಿದ್ದಾರೆ. ಸರಸ್ವತಿ ಕಾನೂನು ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಊಟದಲ್ಲಿ ಇರುವ ಹುಳಗಳನ್ನು ಆರಿಸಿ, ಅದನ್ನು ತಟ್ಟೆಗೆ ಹಾಕಿ ಬಳಿಕ ರೂಮಲ್ಲಿ ಹಾಕಿ ಚೆನ್ನಾಗಿ ಹೊಡೆಯಿರಿ. ಏನಾದರೂ ಸಮಸ್ಯೆಯಾದರೆ ನಾನಿರುತ್ತೇನೆ ಯೋಚಿಸಬೇಡಿ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: ಶಿವಮೊಗ್ಗದಲ್ಲಿ ಶುರುವಾಗಿದ್ಯಾ ದ್ವೇಷ ರಾಜಕಾರಣ? : ಸರ್ಕಾರದ ಟಾರ್ಗೆಟ್ ಆದ್ರಾ ಬಿಜೆಪಿ ಕಾರ್ಯಕರ್ತರು !