Jul 16, 2023, 9:21 AM IST
ಈಗ ಮಾರ್ಕೆಟ್‌ನಲ್ಲಿ ಟೊಮೆಟೋ(tomato) ಹಣ್ಣಿಗೆ ರಾಜ ಮರ್ಯಾದೆ. ಇದಕ್ಕೆ ಕಾರಣ ಇದರ ರೇಟು. ಏನ್ ರೇಟು ಕಣ್ರೀ ಅಬ್ಬಬ್ಬಾ.. ಕೆಜಿಗೆ 120 ರಿಂದ 150 ರೂಪಾಯಿ ತನಕನೂ ಇದೆ. ಈ ಹಣ್ಣಿಗೆ ಇಷ್ಟು ರೇಟ್ ಇರೋದ್ರಿಂದಾನೇ, ಕಳ್ಳರು ಕೂಡ ಟೊಮೆಟೋ ಹಣ್ಣಿನ ಮೇಲೆ ಕಣ್ಣು ಹಾಕೋಕೆ ಶುರು ಮಾಡಿದ್ದಾರೆ. ಇದೇ ಕಾರಣಕ್ಕೆ ಈಗ ತರಕಾರಿ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕ್ಕೊಂಡಿದ್ದಾರೆ. ಆದರೆ ಈ ಸಿಸಿಟಿವಿ ಕ್ಯಾಮರಾಗಿಂತಲೂ ಡೆಂಜರ್ ಆಗಿರೋ ಕಾವಲುಗಾರ ಸರ್ಪರಾಜ (snake)ಟೊಮೆಟೋ ಹಣ್ಣಿನ ಕಾವಲಿಗೆ ನಿಂತಿದ್ದಾನೆ.
ಇತ್ತಿಚೆಗಂತೂ ಕೇದಾರನಾಥನ(kedarnath) ಸನ್ನಿಧಿಗೆ ದೂರದೂರಿನಿಂದ ದೇವರ ದರ್ಶನಕ್ಕೆ ಹೋಗುವ ಭಕ್ತರಿಗಿಂತ ಹೆಚ್ಚಾಗಿ, ಅಲ್ಲಿಗೆ ಹೋಗಿ ಫೋಟೋ ತೆಗೆಸಿಕೊಳ್ಳೊರ ಸಂಖ್ಯೆಯೇ ಹೆಚ್ಚಾಗಿದೆ. ಸೆಲ್ಫಿ ಹುಚ್ಚಿಗೆ ಬಿದ್ದ ಯುವಕನೊಬ್ಬ ಮಾಡಿದ್ದ ಹುಚ್ಚಾಟ ಎಂಥಹದ್ದು ನೋಡಿ. ಈತನ ಹುಚ್ಚಾಟ ನೋಡಿ, ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ಸ್ (Security guard)ಓಡೋಡಿ ಬಂದು ಒದೆ ಕೊಟ್ಟಿದ್ರು.ಈ ಯುವಕನಿಗೆ ಹೆಲಿಪ್ಯಾಡ್ ಬಳಿ ಹೋಗಿ ಸೆಲ್ಫಿ ವಿಡಿಯೋ ಮಾಡೋ ಹುಚ್ಚು. ಅದಕ್ಕೆ ಕದ್ದು ಮುಚ್ಚಿ ಹೋಗಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಅದು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಸ್ ಗಳ ಗಮನಕ್ಕೆ ಬರ್ತಿದ್ದ ಹಾಗೆಯೇ ಮೊದಲಿಗೆ ಒಬ್ಬ ಬಂದು ಆತನ ಕಪಾಳಕ್ಕೆ ಸರಿಯಾಗಿ ಒಂದು ಕೊಟ್ಟಿದ್ದಾನೆ.
ಇದನ್ನೂ ವೀಕ್ಷಿಸಿ: Today Horoscope: ಆರೋಗ್ಯ ಸಮಸ್ಯೆ ಇರುವವರು ಈ ದಿನ ಸೂರ್ಯ, ಶಿವನ ಆರಾಧನೆ ಹೀಗೆ ಮಾಡಿ