ನೋಡುಗರ ಕಣ್ಣಿಗೆ ಹಬ್ಬ ಕಾರ್ನಿವಲ್ ಫೆಸ್ಟಿವಲ್: ವಿದ್ಯುತ್ ದೀಪಾಲಂಕಾರ..ಫಿಲ್ಮ್‌ಸಿಟಿ ಝಗಮಗ

Nov 7, 2023, 9:20 AM IST

ರಾಮೋಜಿ ಫಿಲ್ಮ್ ಸಿಟಿ ಜಗತ್ತಿನ ಅತಿದೊಡ್ಡ ಚಿತ್ರನಗರಿ. ಸಿನಿ ದುನಿಯಾದ ಮಾಯಾಲೋಕ. ಹೈದರಾಬಾದ್(Hyderbad) ಹೊರವಲಯದ 2 ಸಾವಿರ ಎಕರೆಯ ವಿಸ್ತೀರ್ಣದ ಅದ್ಭುತ ಪ್ರಪಂಚ ಇದು.ಇಡೀ ಭಾರತೀಯ ಚಿತ್ರರಂಗಕ್ಕೆ ಈ ರಾಮೋಜಿ ಸಿಟಿಯೇ(Ramoji film city) ಜೀವಾಳ. ಓಲ್ಡ್ ಸಿನಿಮಾದಿಂದ ಹಿಡಿದು ಬಾಹುಬಲಿ, RRR, ಪುಷ್ಪ, ಕುರುಕ್ಷೇತ್ರದಂತಹ ಫಿಲ್ಮ್‌ಗಳು ತೆರೆಮೇಲೆ ಮೂಡಿಬರಲು, ಅದೆಷ್ಟೋ ಅದ್ಭುತ ದೃಶ್ಯ ಕಾವ್ಯಕ್ಕೆ ಈ ಫಿಲ್ಮ್ ಸಿಟಿ ಸಾಕ್ಷಿಯಾಗಿದೆ. 2 ಸಾವಿರ ಎಕರೆ ಪ್ರದೇಶದಲ್ಲಿರುವ ಈ ಫಿಲ್ಮ್‌ಸಿಟಿ. ನೋಡಗರನ್ನ ಮಂತ್ರಮುಗ್ಧನಾಗಿಸುತ್ತೆ. ಅಷ್ಟೇ ಅಲ್ಲ ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಗಿನ್ನಿಸ್ ಪುಟ (Guinness record) ಸೇರಿದ ಈ ಫಿಲ್ಮ್‌ಸಿಟಿಗೆ ಪ್ರತಿನಿತ್ಯ 3 ಸಾವಿರಕ್ಕೂ ಹೆಚ್ಚು ಮಂದಿ ಬರ್ತಾರೆ. ನಿರ್ದೇಶಕರು, ನಿರ್ಮಾಪಕರು, ಚಿತ್ರತಂತ್ರಜ್ಞಾನರು ಒಟ್ಟಿಗೆ ಕೆಲಸ ಮಾಡಲು ಇರೋ ಏಕೈಕ ಸ್ಥಳವೇ ಈ ಫಿಲ್ಮ್‌ಸಿಟಿ. ಅಮೆರಿಕಾ ಲಂಡನ್, ಉತ್ತರಭಾರತ,ದಕ್ಷಿಣ ಭಾರತ..ಅಷ್ಟೇ ಯಾಕೇ..ಮೊಘಲ್ ಸಾಮ್ರಾಜ್ಯ,ತಾಜ್‌ಮಹಲ್‌,ಹವಾ ಮಹಲ್ ನಂತಹ ಹಲವು ಶಿಲ್ಪಕಲೆ ಸೇರಿ ವಿಭಿನ್ನ ಸೆಟ್‌ಗಳು ಈ ಫಿಲ್ಮ್‌ಸಿಟಿಯೊಳಗೆ ಅಡಗಿದೆ.

ಇದನ್ನೂ ವೀಕ್ಷಿಸಿ:  Today Horoscope: ತುಲಾ ರಾಶಿಯವರಿಗೆ ಇಂದು ಲಾಭದ ದಿನವಾಗಿದ್ದು,ವೃತ್ತಿಯಲ್ಲಿ ಅನುಕೂಲ