2000 ಕೋಟಿಯ ಅರಮನೆ, 7 ಸಾವಿರ ಕಾರ್‌, ಇದು ಬ್ರೂನೈ ಅರಸನ ದರ್ಬಾರ್‌!

Jul 6, 2022, 9:30 PM IST

ಬೆಂಗಳೂರು (ಜುಲೈ 6): ಆಗ್ನೇಯ ಏಷ್ಯಾದ ಬೊರ್ನಿಯೊ (Bornio) ದ್ವೀಪದ ಉತ್ತರ ಕರಾವಳಿಯಲ್ಲಿರುವ ಪುಟ್ಟ ದೇಶ ಬ್ರೂನೈ (Brunei ). ದಕ್ಷಿಣ ಚೀನಾ (South China Sea) ಸಮುದ್ರ ತೀರವನ್ನು ಹೊರತುಪಡಿಸಿ, ಇದು ಸಂಪೂರ್ಣವಾಗಿ ಮಲೇಷಿಯಾದ ಸರವಾಕ್ ರಾಜ್ಯದಿಂದ ಆವೃತವಾಗಿರುವ ಈ ದೇಶದ ಸುಲ್ತಾನ್‌ ಹಸನಲ್ ಬೊಲ್ಕಿಯಾ (Hassanal Bolkiah). ಇವರ ರಾಜದರ್ಬಾರ್‌ಅನ್ನು ಕೇಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು.

7 ಸಾವಿರ ಕಾರುಗಳು, 2 ಸಾವಿರ ಕೋಟಿ ಮೌಲ್ಯದ ಅರಮನೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನೇ ಮೀರಿಸುವಷ್ಟು ಆಸ್ತಿಯ ಅಧಿಪತಿ ಇವರು. ರಾಜಮಹಾರಾಜರ ಕಥೆಗಳನ್ನು ಕೇಳಿರುತ್ತೀರಿ. ಆದರೆ, ಹಸನಲ್ ಬೊಲ್ಕಿಯಾ ಅವರ ವೈಭೋಗವನ್ನು ನೋಡಿದರೆ, ಅಚ್ಚರಿಯಾಗವುದು ಖಂಡಿತ.

Assembly Election 2023: ಕರ್ನಾಟಕ ಕುರುಕ್ಷೇತ್ರ: ರಾಮನಗರ ಜಿಲ್ಲೆಯ ರಾಜಕೀಯ ಲೆಕ್ಕಾಚಾರ

ಬ್ರೂನೈ ಎನ್ನುವ ದ್ವೀಪದೇಶವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ಮನೆತನ ಆಳುತ್ತಿದೆ. ಇವರ ಚಿನ್ನದ ಅರಮನೆ ಎಂಥವರನ್ನು ಅಚ್ಚರಿಗೆ ನೂಕುವುದು ಖಂಡಿತ. ಹಸನಲ್‌ ಬೊಲ್ಕಿಯಾ ಅವರ ಚಿನ್ನದ ಅರಮನೆಗೆ ಇಡೀ ವಿಶ್ವವೇ ಅಚ್ಚರಿ ಪಟ್ಟಿದೆ.