Dec 12, 2019, 1:24 PM IST
ವಿಜಯಪುರ(ಡಿ.12): ಚಿಂದಿ ಆಯುವ ಮಹಿಳೆಯರ ಮೇಲೆ ಯುವಕರ ಗುಂಪೊಂದು ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಮಹಿಳೆಯರು ಕಳ್ಳತನ ಮಾಡುತ್ತಿದ್ದಾರೆ ಎಂದು ತಿಳಿದ ಪುಂಡರು ಅಮಾನವೀಯವಾಗಿ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪುಂಡರ ಗುಂಪು ಮಹಿಳೆಯರಿಗೆ ರಕ್ತ ಬರುವಂತೆ ವೈರ್‌ನಿಂದ ಥಳಿಸಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಗರ್ಭಿಣಿ ಇದ್ದೀನಿ ಬಿಡಿ ಎಂದು ಗೋಗರೆದರೂ ಮಾನವೀಯತೆ ಇಲ್ಲವೇನೋ ಎಂಬಂತೆ ಮನಬಂದಂತೆ ಹೊಡೆದಿದ್ದಾರೆ. ಮಹಿಳೆಯರ ಜೊತೆ ಇದ್ದ ವೃದ್ಧೆಗೂ ರಕ್ತ ಬರುವಂತೆ ಥಳಿಸಿ, ಹೊಟ್ಟೆಗೆ ಜೋರಾಗಿ ಒದ್ದಿದ್ದಾರೆ. ಈ ವಿಡಿಯೋ ನೋಡಿದ ಜನ ಪುಂಡರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.