ಲೋಕಾಪರ್ಣೆಗೆ ಸಿದ್ಧವಾಯ್ತು ಯರಗೋಳ್ ಜಲಾಶಯ: ನ. 10ಕ್ಕೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಲೋಕಾಪರ್ಣೆಗೆ ಸಿದ್ಧವಾಯ್ತು ಯರಗೋಳ್ ಜಲಾಶಯ: ನ. 10ಕ್ಕೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ

Published : Nov 04, 2023, 11:30 AM IST

ಅದು ಕೋಲಾರ ಜಿಲ್ಲೆಯ ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆ.. ಮೂರು ತಾಲೂಕುಗಳಿಗೆ ನೀರಿನ ಸೌಲಭ್ಯ ಒದಗಿಸುವ ಜಲಾಶಯದ ಕಾಮಗಾರಿ ಆರಂಭವಾಗಿ ಬರೋಬ್ಬರಿ 17 ವರ್ಷವಾಗಿತ್ತು. ಇದೀಗ ಈ ಜಲಾಶಯಕ್ಕೆ ನವೆಂಬರ್ 10 ರಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ. 
 

ಯರಗೋಳ್ ಜಲಾಶಯ.. ಇದು ಕೋಲಾರದಲ್ಲೇ(Kolar) ನಿರ್ಮಾಣವಾದ ಮೊಟ್ಟ ಮೊದಲ ಜಲಾಶಯ.. ಕೆರೆ ನೀರು, ಮಳೆ ನೀರು, ಹಳ್ಳ ಕೊಳ್ಳದ ನೀರು ವ್ಯರ್ಥ್ಯವಾಗಿ ತಮಿಳುನಾಡಿಗೆ(Tamilnadu) ಹರಿದು ಹೋಗುತ್ತಿದ್ದಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾದ ಅಣೆಕಟ್ಟು. ಈ ಯೋಜನೆ ಕಾರ್ಯರೂಪಕ್ಕೆ ಬಂದು ಬರೋಬ್ಬರಿ 17 ವರ್ಷವಾಗಿತ್ತು. ಇದೀಗ 17 ವರ್ಷದ ಬಳಿಕ ಡ್ಯಾಂ ಕಾಮಗಾರಿ ಮುಗಿದಿದ್ದು, ಲೋಕಾಪರ್ಣೆಗೆ ಸಜ್ಜಾಗಿದೆ. ಕೋಲಾರದ ಬಂಗಾರಪೇಟೆ ತಾಲೂಕಿನ ಯರಗೋಳು ಗ್ರಾಮದ ಬಳಿ ಡ್ಯಾಂ(Yargol Dam) ನಿರ್ಮಾಣ ಮಾಡಿಲಾಗಿದೆ. ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಸೇರಿ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. 1 ಟಿಎಂಸಿಯಷ್ಟು ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಡ್ಯಾಂಗೆ ಇದೇ ನವೆಂಬರ್-10 ರಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ. ಯರಾಗೋಳ್ ಡ್ಯಾಂ ನಿರ್ಮಾಣದಲ್ಲಿ ಬಿಜೆಪಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. 2006ರಲ್ಲಿ ಜಲಾಶಯಕ್ಕೆ 240 ಕೋಟಿ ವೆಚ್ಚಕ್ಕೆ ಡಿಪಿಆರ್ ಮಾಡಿ ಆಗಿನ ಸಿಎಂ ಕುಮಾರಸ್ವಾಮಿ ಶಂಕು ಸ್ಥಾಪನೆ ಮಾಡಿದ್ರು. ಆದರೆ 2013ರರವೆಗೂ ಯೋಜನೆ ಕಾಮಗಾರಿ ನಡೆಯದೇ ಸ್ಥಗಿತವಾಗಿತ್ತು. ನಂತರ 2013ರಲ್ಲಿ ಅಧಿಕಾರಕ್ಕೇರಿದ ಆಗಿನ ಸಿಎಂ ಸಿದ್ದರಾಮಯ್ಯಗೆ ಸ್ಥಳೀಯ ಶಾಸಕರ ಒತ್ತಾಯದ ಮೇರೆಗೆ ಯೋಜನೆಗೆ ಮರು ಅನುಮೋದನೆ ನೀಡಲಾಯ್ತು. ಆದರೆ ಸಂಸದ ಮುನಿಸ್ವಾಮಿ ಮತ್ತು ಮಾಜಿ ಸಚಿವ ಮುನಿರತ್ನ ವರಸೆಯೇ ಬೇರೆ ಇದೆ.. ಹಾಲಿ ಕೋಲಾರದ ಉಸ್ತುವಾರಿ ಬೈರತಿ ಸುರೇಶ್ ದಾಟಿಯೇ ಮತ್ತೊಂದಿದೆ.

ಇದನ್ನೂ ವೀಕ್ಷಿಸಿ:  ಕೆಎಎಸ್‌ ಪರೀಕ್ಷೆಯಲ್ಲೂ ನಡೆದಿತ್ತಾ ಅಕ್ರಮ..? ಕೆಪಿಎಸ್‌ಸಿ ವಿರುದ್ಧವೇ ಸಿಡಿದೆದ್ದ ಪರೀಕ್ಷಾರ್ಥಿಗಳು..!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more