Wheeling : ಬೆಂಗಳೂರಿನಲ್ಲಿ ವ್ಹೀಲಿಂಗ್‌ ಹುಚ್ಚಾಟ: ಡಿಸಿಪಿ ಆಫೀಸ್‌ ಮುಂಭಾಗದಲ್ಲೇ ಯುವಕರ ಪುಂಡಾಟ

Jan 2, 2024, 10:33 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ವ್ಹೀಲಿಂಗ್‌(Wheeling) ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ಡಿಸಿಪಿ ಆಫೀಸ್‌ ಮುಂಭಾಗದಲ್ಲಿಯೇ ವ್ಹೀಲಿಂಗ್‌ ನಡೆದಿದೆ. ಸೌತ್ ಎಂಡ್ ಸರ್ಕಲ್‌ನಲ್ಲಿರುವ(South End Circle) ದಕ್ಷಿಣ ವಿಭಾಗದ ಡಿಸಿಪಿ ಆಫೀಸ್(DCP office) ಮುಂಭಾಗ ವ್ಹೀಲಿಂಗ್‌ ನಡೆದಿದೆ. ಇದು ವ್ಹೀಲಿಂಗ್‌ ಮಾಡೋರಿಗೆ ಫೆವರೇಟ್‌ ಜಾಗ ಕೂಡ ಆಗಿದೆ. ಇಲ್ಲಿಗೆ ಬರ್ತಿದ್ದಂಗೆ ಕೆಲ ಕಿಡಿಗೇಡಿಗಳ ಬೈಕಿನ ವೇಗ ಕೂಡ ಹೆಚ್ಚಾಗುತ್ತೆ. ಇತ್ತೀಚಿಗೆ ಇದೇ ಜಾಗದಲ್ಲಿ ಕಿರಾತಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಸಹ ಕೊಟ್ಟಿದ್ದ. ಪಕ್ಕದಲ್ಲಿಯೇ ಡಿಸಿಪಿ ಆಫೀಸ್ ಇದ್ರೂ, ಸುತ್ತಲೂ ಕ್ಯಾಮೆರಾ ಇದೆ ಅನ್ನೋ ಭಯ ಇಲ್ಲದೆ ವ್ಹೀಲಿಂಗ್‌ ಮಾಡುತ್ತಿದ್ದಾರೆ. ಬರೀ ಸೌತ್ ಎಂಡ್ ಮಾತ್ರವಲ್ಲದೇ, ಕಳೆದೊಂದು ವಾರದಲ್ಲಿ ನಗರದ ಹಲವೆಡೆ ವ್ಹೀಲಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. 

ಇದನ್ನೂ ವೀಕ್ಷಿಸಿ:  Belagavi Accident: ಬೆಳಗಾವಿಯಲ್ಲಿ ಭೀಕರ ಅಪಘಾತ: 50ಮೀ ಮೇಲಿಂದ ಹಾರಿ ಬಿದ್ದ ಯುವತಿ..ಸಿಸಿಟಿವಿಯಲ್ಲಿ ದೃಶ್ಯ ಸೆರೆ