ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಸಂಭ್ರಮಾಚರಣೆ ಮಧ್ಯೆ ಬೆಂಗಳೂರಿಗೆ ದೇವಕನ್ಯೆ ಎಂಟ್ರಿ ಕೊಟ್ಟಿದ್ದಾರೆ.
ಬೆಂಗಳೂರು: ಬೆಂಗಳೂರಿನ ಪ್ರಮುಖ ಜಾಗಗಳಲ್ಲಿ ದೇವಕನ್ಯೆ ಓಡಾಡುತ್ತಿದ್ದಾಳೆ. ಎಂ.ಜಿ ರೋಡ್ ಮೆಟ್ರೋದಲ್ಲಿದಲ್ಲಿ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಅರೇ ಏನಿದು ದೇವಕನ್ಯೆಯ ಸಂಚಾರ ಎಂದು ಕೇಳ್ಬೇಡಿ. ಯುವತಿಯೊಬ್ಬಳು ದೇವಕನ್ಯೆಯ ವೇಶದಲ್ಲಿ ಓಡಾಡುತ್ತಿದ್ದಾಳೆ. ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ದೇವಕನ್ಯೆಯ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೆ ಅಲ್ಲದೆ ಈ ದೇವಕನ್ಯೆ ಮೋಟ್ರೋದಲ್ಲೂ ಪ್ರಯಾಣ ಮಾಡಿರುವ ವಿಡಿಯೋಗಳು ಸಕತ್ ಸದ್ದು ಮಾಡುತ್ತಿದೆ.
Christmas 2022: ಸಾಂತಾ ಟೋಪಿ ಧರಿಸಿರುವ ಎಮಿರೇಟ್ಸ್ ವಿಮಾನದ ಪೋಸ್ಟ್ ವೈರಲ್