Jul 20, 2023, 1:30 PM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಬಯಾಲಾಗಿದೆ. ಇವರೆಲ್ಲಾ ಪರಪ್ಪನ ಅಗ್ರಹಾರ(Parappana agrahara jail) ಜೈಲಿನಲ್ಲಿ ಇದ್ದರು. ಹಾಗಾಗಿ ಪರಪ್ಪನ ಅಗ್ರಹಾರ ಜೈಲು ಇಸ್ಲಾಮಿಕ್ ಟೆರರ್ ನೇಮಕಾತಿಯ ಕೇಂದ್ರವಾಗ್ತಿದೆಯಾ ಎಂಬ ಅನುಮಾನ ಮೂಡಿದೆ. ಜೈಲು ಅಧಿಕಾರಿಗಳ ಹಣದ ಆಸೆಗೆ ಇದೀಗ ಜೈಲು ಉಗ್ರರ ಫ್ಯಾಕ್ಟರಿ ಆಗುತ್ತಿದೆ ಎನ್ನಲಾಗ್ತಿದೆ. ಪರಪ್ಪನ ಜೈಲಿನಲ್ಲಿ ಉಗ್ರರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ. 2008 ರ ಸರಣಿ ಬಾಂಬ್ ಬ್ಲಾಸ್ಟ್(Bomb Blast) ಆರೋಪಿಗೆ ವಿಐಪಿ ಟ್ರೀಟ್‌ಮೆಂಟ್ ನೀಡಲಾಗುತ್ತಿತ್ತು ಎನ್ನಲಾಗ್ತಿದೆ. ಟಿ. ನಾಸೀರ್‌ಗೆ ಜೈಲಿನಲ್ಲಿ 4 ವಿಐಪಿ ಸೆಲ್‌ಗಳನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ನವರು ರಾಜ್ಯ ದೇಶದಲ್ಲಿ ತಲೆ ತಗ್ಗಿಸುವಂತೆ ಮಾಡಿದ್ದಾರೆ: ಕೆ.ಎಸ್. ಈಶ್ವರಪ್ಪ