ಮಳೆ ನಿಂತರೂ ಕೃಷ್ಣಾ ನದಿಯಲ್ಲಿ ನಿಲ್ಲದ ಪ್ರವಾಹ| ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿಯಲ್ಲಿ ನಡೆದ ಘಟನೆ| ಜೀವದ ಹಂಗು ಬಿಟ್ಟು ಪ್ಲಾಸ್ಟಿಕ್ ಬ್ಯಾರಲ್ ಮೇಲೆ ಜನರ ಸಂಚಾರ|
ಬೆಳಗಾವಿ(ಆ.22): ಜಿಲ್ಲೆಯಲ್ಲಿ ಮಳೆ ನಿಂತರೂ ಕೃಷ್ಣಾ ನದಿಯಲ್ಲಿ ಪ್ರವಾಹ ಮಾತ್ರ ನಿಲ್ಲುತ್ತಿಲ್ಲ. ಪ್ರಾಣವನ್ನ ಪಣಕ್ಕಿಟ್ಟು ಜನರು ನದಿಯಲ್ಲಿ ಪ್ರಯಾಣ ಮಾಡುತ್ತಿರುವ ಘಟನೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರು ಕ್ಷೇತ್ರ ಅಥಣಿ ತಾಲೂಕಿನ ಹುಲಗಬಾಳಿಯಲ್ಲಿ ನಡೆದಿದೆ.
RSS ವಿರುದ್ಧದ ಸಿದ್ದರಾಮಯ್ಯ ಪತ್ರಕ್ಕೆ ಸಚಿವ ಸಿ.ಟಿ. ರವಿ ಕೆಂಡ
ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜೀವದ ಹಂಗು ಬಿಟ್ಟು ಪ್ಲಾಸ್ಟಿಕ್ ಬ್ಯಾರಲ್ ಮೇಲೆ ಜನರು ಸಂಚಾರ ಮಾಡುತ್ತಿದ್ದಾರೆ. ಪ್ರವಾಹದಿಂದ ಇಲ್ಲಿನ ಜನರು ಪಡಬಾರದ ಕಷ್ಟಗಳನ್ನ ಅನುಭವಿಸುತ್ತಿದ್ದಾರೆ.