ಬಳ್ಳಾರಿ ಬಂಟನ ಭ್ರಷ್ಟ ಚರಿತ್ರೆ ನೋಡಿಯೂ ತಪ್ಪು ಮಾಡಿದ್ರಾ ಸಿದ್ದು..?'ನಾಗ'ಕೋಟೆಯಲ್ಲೇ ಬಂಧಿಯಾದ ನಾಗೇಂದ್ರ..!

Jul 13, 2024, 5:29 PM IST

ಬಳ್ಳಾರಿ ಗಣಿಧಣಿಗಳ ಅಕ್ರಮ, ಅಹಂಕಾರದ ವಿರುದ್ಧ ತೋಳು ತಟ್ಟಿದ್ದ ಸಿದ್ದರಾಮಯ್ಯ (Siddaramaiah), ಬಳ್ಳಾರಿಗೆ ಪಾದಯಾದ್ರೆ ಹೋಗಿ, ಗಣಿಧಣಿಗಳ ಅಟ್ಟಹಾಸವನ್ನು ಮಟ್ಟ ಹಾಕಿದ್ದುಈಗ ಇತಿಹಾಸ. ಯಾವ ಅಕ್ರಮದ ವಿರುದ್ಧ ಸಿದ್ದರಾಮಯ್ಯ ಸಿಡಿದೆದ್ದು ನಿಂತಿದ್ರೋ, ಯಾವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ರೋ, ಅದೇ ಅಕ್ರಮಗಳ ಸರದಾರರಲ್ಲಿ ಒಬ್ಬನನ್ನು ಪಕ್ಷಕ್ಕೆ ಸೇರಿಸಿಕೊಂಡು, ಮಂತ್ರಿಪಟ್ಟ ಕಟ್ಟಿದ್ದ ಸಿದ್ದರಾಮಯ್ಯನವರಿಗೀಗ ಅದೇ ತಿರುಗುಬಾಣವಾಗಿ ಬಿಟ್ಟಿದೆ. ಅಕ್ರಮ ಗಣಿಗಾರಿಕೆ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅವತ್ತು ಜೈಲಿಗೆ ಹೋಗಿದ್ದ ಮಾಜಿ ಸಚಿವ ನಾಗೇಂದ್ರ(Nagendra), ಈಗ ಮತ್ತೊಂದು ಅಕ್ರಮದಲ್ಲಿ ಅರೆಸ್ಟ್ ಆಗೋ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಮುಜುಗರ ತಂದಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ(Valmiki Nigam Scam) ನಡೆದಿರೋ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವ್ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬೇಲೇಕೇರಿ ಅದಿರು ಕೇಸ್‌ನಲ್ಲಿ(Belekeri Illegal Iron Ore Export Case) 10 ವರ್ಷಗಳ ಹಿಂದೆ ಜೈಲು ಪಾಲಾಗಿದ್ದ ನಾಗೇಂದ್ರ ಮತ್ತೆ ಜೈಲು ಸೇರುವ ಹಾದಿಯಲ್ಲಿದ್ದಾರೆ. ವಾಲ್ಮೀಕಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ-ಕಾಂಗ್ರೆಸ್ ಶಾಸಕ ಬಸನವನಗೌಡ ದದ್ದಲ್ ಸೇರಿದಂತೆ ಅಧಿಕಾರಿಗಳ ನಿವಾಸಗಳ ಮೇಲೆ ಬುಧವಾರ ಇ.ಡಿ ದಾಳಿ ನಡೆದಿತ್ತು. ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಮನೆ, ಬೆಂಗಳೂರಿನಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. 

ಇದನ್ನೂ ವೀಕ್ಷಿಸಿ:  ಕನ್ನಡದ ಮನೆಮನೆಗಳಲ್ಲೂ ನಗು ಉಕ್ಕಿಸಿದ್ದ ವರಲಕ್ಷ್ಮಿ! ಎಲ್ಲೆಲ್ಲೂ ಮಾರ್ದನಿಸುತ್ತಲೇ ಇರಲಿದೆ ಅಪರ್ಣಾ ಕಲರವ!