Jul 17, 2024, 1:24 PM IST
ವಾಲ್ಮೀಕಿ ನಿಗಮ ಹಗರಣದ(Valmiki Corporation scam ) ಹಣದ ವರ್ಗಾವಣೆಯ ಮೂಲವನ್ನು ತನಿಖಾ ತಂಡ ಹುಡುಕುತ್ತಿದೆ. ವಾಲ್ಮೀಕಿ ಹಗರಣದ ಗ್ಯಾಂಗ್‌ನಿಂದ ರೈತನ(Farmer) ಖಾತೆಗೆ ಹಣ ವರ್ಗಾವಣೆಯಾಗಿದೆ ಎನ್ನಲಾಗ್ತಿದೆ. ನಾಗೇಂದ್ರನ ಆಪ್ತನ ಅಕೌಂಟ್‌ನಿಂದಲೇ ಹಣ ವರ್ಗಾವಣೆಯಾಗಿದೆಯಂತೆ. ನೆಕ್ಕಂಟಿ ನಾಗರಾಜ್ ಅಕೌಂಟ್ ಮೂಲಕವೇ ಬೇರೆ ಅಕೌಂಟಿಗೆ ಹಣ ಜಮೆಯಾಗಿದ್ದು, ಸಿಂಧನೂರು ತಾ. ಕೋನಾ ವೆಂಕಟರಾವ್ ರೆಡ್ಡಿ ಹಾಗೂ ಇಬ್ಬರು ಮಕ್ಕಳ ಅಕೌಂಟ್‌ಗೆ ಹಣ ವರ್ಗಾವಣೆಯಾಗಿದೆ. ಓರ್ವ ಮೊಮ್ಮಗನ ಅಕೌಂಟಿಗೆ ಅಕ್ರಮ ಹಣ ವರ್ಗಾವಣೆಯಾಗಿದ್ದು(Illegal money transfer), ಬೂದಿಹಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ರೆಡ್ಡಿ, ವೆಂಕಟರಾವ್ ರೆಡ್ಡಿಯ ಇಬ್ಬರು ಪುತ್ರಿಯರ ಅಕೌಂಟ್‌ಗೆ ಹಣ ವರ್ಗಾವಣೆಯಾಗಿದೆ. ವೆಂಕಟರಾವ್ ರೆಡ್ಡಿ ಮೊಮ್ಮಗನ ಅಕೌಂಟಿಗೂ ಲಕ್ಷ ಲಕ್ಷ ಹಣ ಹೋಗಿದೆಯಂತೆ. ಲಕ್ಕಂಸಾನಿ ಲಕ್ಷ್ಮಿ, ರತ್ನಕುಮಾರಿ , ಮೊಮ್ಮಗ ಸುನೀಲ್ , ಕೋನಾ ವೆಂಕಟರಾವ್ ರೆಡ್ಡಿ ಅಕೌಂಟಿಗೆ 12 ಲಕ್ಷ ರೂ. ಜಮೆಯಾಗಿದೆಯಂತೆ. ಪುತ್ರಿ ಲಕ್ಕಂಸಾನಿ ಲಕ್ಷ್ಮಿ ಅಕೌಂಟಿಗೆ 25 ಲಕ್ಷ ರೂ. ಮತ್ತೋರ್ವ ಪುತ್ರಿ ರತ್ನಕುಮಾರಿ ಅಕೌಂಟಿಗೆ 25 ಲಕ್ಷ ರೂ. ಮೊಮ್ಮಗ ಸುನೀಲ್ ಅಲಿಯಾಸ್ ಸಂದೀಪ್ ಅಕೌಂಟಿಗೆ 36 ಲಕ್ಷ ಜಮೆಯಾಗಿದೆ. ಬೂದಿಹಾಳ ಕ್ಯಾಂಪ್ ನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಖಾತೆಗೆ ಹಣ ವರ್ಗಾವಣೆಯಾಗಿದ್ದು, ನಾಲ್ವರ ಅಕೌಂಟ್‌ಗಳನ್ನೂ ಸದ್ಯಕ್ಕೆ ಸೀಜ್ ಮಾಡಿರುವ ಅಧಿಕಾರಿಗಳು. ಅಕೌಂಟ್ ಸೀಜ್‌ಗೆ ಬೆಂಗಳೂರಿನಿಂದಲೇ ಸಿಐಡಿ , ಸಿಬಿಐ ಬ್ಯಾಂಕ್‌ಗೆ ಸೂಚನೆ ನೀಡಿದೆ.
ಇದನ್ನೂ ವೀಕ್ಷಿಸಿ: ಅಪೆಕ್ಸ್ ಬ್ಯಾಂಕ್‌ನಲ್ಲಿ ಸಾಲ ನೀಡುವಲ್ಲಿ ಗೋಲ್‌ಮಾಲ್..? ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬ ಸಚಿವನಿಗೆ ಸಂಕಷ್ಟ !