Jul 20, 2024, 4:50 PM IST
ಅಂದಿನ ಒಂದು ನಿರ್ಧಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಅದೇ ಇಂದು ತಿರುಗುಬಾಣವಾಗಿದೆ. ಅಂದು ತಲೆಯ ಮೇಲೆ ಹೊತ್ತು ಮೆರೆಸಿದವರೇ ಇಂದು ಸಿದ್ದರಾಮಯ್ಯನವರ ತಲೆಗೆ ಹದ್ದಾಗಿ ಕುಕ್ಕುತ್ತಿದ್ದಾರೆ. ಅಕ್ರಮದ ಕೋಟೆಯನ್ನೇ ನಡುಗಿಸಿದ್ದ ಸಿದ್ದರಾಮಯ್ಯನವರಿಗೀಗ ಅದೇ ಅಕ್ರಮದ ಸರದಾರನಿಂದ ಕಳಂಕ ಬಂದಿದೆ. 14 ವರ್ಷಗಳ ಹಿಂದೆ ಯಾರ ವಿರುದ್ಧ ಸಿದ್ದು ವೀರಾವೇಶದಿಂದ ಅಬ್ಬರಿಸಿದ್ರೋ, ಅದೇ ವ್ಯಕ್ತಿಯಿಂದ ಈಗ ಸಿದ್ದು ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿದ್ದಾನೆ. ಇದು ಸಿದ್ದರಾಮಯ್ಯನವರು ಸಾಕಿದ ಗಿಣಿಯೇ ಹದ್ದಾಗಿ ಕುಕ್ಕಿದ ಕಥೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ಕಥೆಯಿದು. ಕಾಂಗ್ರೆಸ್ ಸರ್ಕಾರ (Congress government)ಇವತ್ತು ವಾಲ್ಮೀಕಿ ಹಗರಣದ (Valmiki corporation scam) ಚಕ್ರವ್ಯೂಹದಲ್ಲಿ ಸಿಲುಕಿ ವಿಲ ವಿಲ ಅಂತ ಒದ್ದಾಡ್ತಾ ಇದೆ ಅಂದ್ರೆ ಅದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ ಅದೊಂದು ಪ್ರಮಾದ. ಅವತ್ತು ರಾಜ್ಯದ ಶಕ್ತಿಕೇಂದ್ರ ಅಕ್ಷರಶಃ ರಣರಂಗವಾಗಿ ಬಿಟ್ಟಿತ್ತು. ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ನಡೆದಿದ್ದ ರಣರೋಚಕ ಸಂಘರ್ಷವದು. ಅಕ್ರಮ ಗಣಿಗಾರಿಕೆ ಬಗ್ಗೆ ಸಿದ್ದರಾಮಯ್ಯ ಮಾತಾಡ್ತಾ ಇದ್ದಾಗ, ಶುರುವಾಗಿದ್ದ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗಿತ್ತು. ತಾಕತ್ತಿದ್ರೆ ಬಳ್ಳಾರಿಗೆ ಬನ್ನಿ, ನಿಮ್ಮನ್ನು ನೋಡ್ಕೋತೀವಿ ಅಂತ ರೆಡ್ಡಿ ಬ್ರದರ್ಸ್ ಸವಾಲ್ ಹಾಕಿದ್ರೆ, ವಿಧಾನಸಭೆಯಲ್ಲೇ ತೋಳು ತಟ್ಟಿ ಅಬ್ಬರಿಸಿದ್ದರು 'ಪೈಲ್ವಾನ್'ರಾಮಯ್ಯ.
ಇದನ್ನೂ ವೀಕ್ಷಿಸಿ: ಶಿರೂರು ಗುಡ್ಡ ಕುಸಿತ ಪ್ರಕರಣ: ಸ್ಥಳಕ್ಕೆ ಹೆಚ್‌ಡಿಕೆ ಭೇಟಿ.. ಮಾಧ್ಯಮಗಳಿಗೆ ಜಿಲ್ಲಾಡಳಿತದಿಂದ ತಡೆ