Uttara Kannada: ವಿಷಕಾರಿಯಾಗಿ ಬದಲಾದ ಯಲ್ಲಾಪುರದ ಹೊಸಳ್ಳಿ ಕೆರೆ!

Uttara Kannada: ವಿಷಕಾರಿಯಾಗಿ ಬದಲಾದ ಯಲ್ಲಾಪುರದ ಹೊಸಳ್ಳಿ ಕೆರೆ!

Published : Mar 14, 2022, 02:28 PM ISTUpdated : Mar 14, 2022, 02:38 PM IST

*ಖಾಸಗಿ ಸಂಸ್ಥೆ ಬಿಡುವ ವಿಷಕಾರಿ ನೀರಿನಿಂದ ನೀರು ಸಂಪೂರ್ಣ ಕಲುಷಿತ 
*ವಿಷಕಾರಿ ಕೆರೆ ನೀರಿನಿಂದಾಗಿ ಅಂತರ್ಜಲ ಕೂಡಾ ಕಲುಷಿತ ? 
*28 ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಕಿರುವತ್ತಿಯ ಹೊಸಳ್ಳಿ ಕೆರೆ 
*ಕೆಮಿಕಲ್ ಮಿಶ್ರಿತ ನೀರು,  ತ್ಯಾಜ್ಯ ನೀರು ನೇರವಾಗಿ ಹೊಸಳ್ಳಿ ಕೆರೆಗೆ 
 

ಉತ್ತರ ಕನ್ನಡ (ಮಾ. 14): ಹಳ್ಳಿಯ ಜನರಿಗೆ ಹಾಗೂ ಜಾನುವಾರುಗಳಿಗೆ ಬಳಕೆಯಾಗುತ್ತಿದ್ದ ಉತ್ತರಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಹೊಸಳ್ಳಿ ಕೆರೆ ಸಂಪೂರ್ಣ ವಿಷಕಾರಿಯಾಗಿ ಮಾರ್ಪಾಡಾಗಿದೆ. ಐಸ್ ಕ್ರೀಂ ತಯಾರಿಕಾ ಕಂಪನಿ ಹಾಗೂ ಹಾಲು ಉತ್ಪನ್ನಗಳ ತಯಾರಿಕಾ ಕಂಪೆನಿಯಿಂದ ಬಿಡುಗಡೆಯಾಗು ಕೆಮಿಕಲ್ ಮಿಶ್ರಿತ ನೀರು ಹಾಗೂ ಜನರು ಬಿಡುವ ತ್ಯಾಜ್ಯ ನೀರು ನೇರವಾಗಿ ಹೊಸಳ್ಳಿ ಕೆರೆಗೆ ಸೇರುವುದರಿಂದ ಕೆರೆ ನೀರು ಸಂಪೂರ್ಣ ವಿಷವಾಗಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. 

ಇದನ್ನೂ ಓದಿSagarmala ಯೋಜನೆಗೆ ವಿರೋಧ, ಶಾಸಕಿ ಹಾಗೂ ಮೀನುಗಾರರ ನಡುವೆ ವಾಕ್ಸಮರ!

ಈ ಕೆರೆಯ ಬಳಿ ಸುಳಿಯಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ದುರ್ವಾಸನೆ ಬರುತ್ತಿದ್ದು, ಕಿರುವತ್ತಿಯ ಜನರು ಇದರಿಂದ ಸಾಕಷ್ಟು ರೋಸಿಹೋಗಿದ್ದಾರೆ. ಇದರಿಂದಾಗಿ ಸ್ಥಳೀಯರ ಒತ್ತಾಯದ ಮೇರೆಗೆ ಯಲ್ಲಾಪುರ ತಾಲೂಕು ಆರೋಗ್ಯ ಅಧಿಕಾರಿಯ ಮೂಲಕ ನೀರು ಪರೀಕ್ಷಣೆ ಮಾಡಲಾಗಿದ್ದು, ಈ ಕೆರೆ ನೀರಿನ ಪಿಎಚ್ ಪ್ರಮಾಣ ಭಾರೀ ಹೆಚ್ಚಿದ್ದು, ನೀರಿನಲ್ಲಿ ಪ್ರತೀ 100 ಎಂಎಲ್ ನೀರಿಗೆ 1800 ಪ್ರಮಾಣದಷ್ಟು (MPN Count) ಬ್ಯಾಕ್ಟೀರಿಯಾಗಳು ಕೂಡಾ ಪತ್ತೆಯಾಗಿವೆ. ಈ ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಮಾತ್ರವಲ್ಲದೇ, ಇದರಿಂದಾಗಿ ಅಂತರ್ಜಲ ಮಟ್ಟ ಕೂಡಾ ವಿಷವಾಗುತ್ತಿದೆ ಎಂಬ ಅಂಶ ಆತಂಕಕಾರಿಯಾಗಿದೆ‌. ಈ ಕುರಿತ ವರದಿ ಇಲ್ಲಿದೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more