Jan 5, 2025, 9:50 AM IST
ಬೆಂಗಳೂರು(ಜ.05): ಬಿಬಿಎಂಪಿ ಕಸದ ಲಾರಿ ಮತ್ತಿಬ್ಬರು ಬಲಿಯಾದ ಘಟನೆ ನಾಗವಾರ ಹಾಗೂ ಥಣಿಸಂದ್ರ ರಸ್ತೆಯಲ್ಲಿ ನಡೆದಿದೆ. ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಕ್ಕ, ತಂಗಿ ಸಾವನ್ನಪ್ಪಿದ್ದಾರೆ. ನಾಜಿಯಾ ಸುಲ್ತಾನ್(30) ಹಾಗೂ ನಾಜಿಯಾ ಇಬ್ಬಾಗ್ (32) ಮೃತಪಟ್ಟ ಸಹೋದರಿಯರು. ಇವರು ಟಿವಿಎಸ್ ಜುಪಿಟರ್ ಬೈಕ್ ಬರೋ ವೇಳೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಬೈಕ್‌ಗೆ ಹಿಂಬದಿಯಿಂದ ಬಿಬಿಎಂಪಿ ಕಸದ ಲಾರಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಬೈಕ್‌ನಿಂದ ಇಬ್ಬರು ಸಹೋದರಿಯರು ಬಿದ್ದಿದ್ದಾರೆ ಈ ವೇಳೆ ಇವರ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಹೋಗಿದೆ.