ಚಿಕ್ಕೋಡಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು..ಒಬ್ಬ ವ್ಯಕ್ತಿ, ಓರ್ವ ಮಹಿಳೆ ಬಲಿ

May 24, 2024, 8:58 AM IST

ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ(Rain) ಅಬ್ಬರ ಮುಂದುವರೆದಿದೆ. ಗುರುವಾರ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಚಿಕ್ಕೋಡಿಯಲ್ಲಿ ಸಿಡಿಲು(Lightning) ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ, ಓರ್ವ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ. ಬೆಳಗಾವಿ(Belagavi) ಜಿಲ್ಲೆಯ ಪ್ರತ್ಯೇಕ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಹೆಬ್ಬಾಳದಲ್ಲಿ ಗುರು ಪುಂಡಲಿಕ ಸಾವಿಗೀಡಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಬಡಿದಿದೆ. ಇನ್ನೂ ಸಂಕೇಶ್ವರ ಪಟ್ಟದ ಹೊರವಲಯದಲ್ಲಿ ಸಿಡಿಲಿಗೆ 12 ಕುರಿಗಳು ಬಲಿಯಾಗಿವೆ. ರಾಯಭಾಗದ ಹೊರವಲಯದಲ್ಲಿ ಮಹಿಳೆ ಸಿಡಿಲು ಬಡಿದಿದ್ದು, 45 ವರ್ಷದ ಶೋಭಾ ಕೃಷ್ಣ ಕುಲಗೋಡೆ ಸಂಜೆ ಕೃಷಿ ಚಟುವಟಿಕೆ ಮಾಡುವ ವೇಳೆ ಸಿಡಿಲು ಹೊಡೆದಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಅಮ್ಮನವರ ಪ್ರಾರ್ಥನೆ ಮಾಡಿ..ಇದರಿಂದ ದೊರೆಯುವ ಫಲವೇನು ಗೊತ್ತಾ?