Nov 28, 2023, 11:02 AM IST
ಕಾರ್ತಿಕ ಪೂರ್ಣಿಮೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿ(Shri Raghavendra Swami) ನೆಲೆಸಿರುವ ಮಂತ್ರಾಲಯದಲ್ಲಿ(Mantralaya) ತುಂಗಾರತಿ ಹಾಗೂ ತೆಪ್ಪೋತ್ಸವ ಅದ್ದೂರಿಯಾಗಿ ನಡೆಯಿತು.ಶ್ರೀ ಸುಭುದೇಂದ್ರ ತೀರ್ಥರು ದೀಪ ಹಚ್ಚುವ ಮೂಲಕ ತುಂಗಾರತಿಗೆ(Tungarathi) ಚಾಲನೆ ನೀಡಿದ್ರು. ತುಂಗಾರತಿ ಪ್ರಯುಕ್ತ ಮಂತ್ರಾಲಯಕ್ಕೆ ಭಕ್ತಸಾಗರ ಹರಿದುಬಂದಿತ್ತು. ತುಂಗಭದ್ರಾ ನದಿ ತೀರದಲ್ಲಿ ನಡೆದ ತುಂಗಾರತಿ ಉತ್ಸವದಲ್ಲಿ ಭಾಗವಹಿಸಿದ ಭಕ್ತರು ನದಿಯಲ್ಲಿ ದೀಪಗಳನ್ನು ತೇಲಿಬಿಟ್ಟರು. ಬಳಿಕ ತುಂಗಭದ್ರಾ ನದಿಗೆ ಆರತಿ ನೆರವೇರಿಸಿದ್ರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವವೂ ವಿಜೃಂಭಣೆಯಿಂದ ಜರುಗಿತು. ಇನ್ನು ಶ್ರೀಮಠದಿಂದ ತುಂಗಭದ್ರಾ ನದಿಯವರೆಗೆ ಶ್ರೀಪ್ರಹ್ಲಾದ್ ರಾಜರ ಉತ್ಸವ ಮೂರ್ತಿಯನ್ನ ಹೊತ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಆ ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿಗಳು ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ್ರು.ಕಾರ್ತಿಕ ಪೂರ್ಣಿಮೆಯ ನಿಮಿತ್ತ ತುಂಗಾರತಿ ಮತ್ತು ತೆಪ್ಪೋತ್ಸವದ ಸಂಭ್ರಮ ಮನೆಮಾಡಿತ್ತು.. ಸಾವಿರಾರು ಬಖ್ತರು ಉತ್ಸವದಲ್ಲಿ ಬಾಗಿಯಾಗಿ ರಾಯರ ಆರಾಧನೆಯೊಂದಿಗೆ ಸಂಭ್ರಮದಲ್ಲಿ ಭಾಗಿಯಾದರು.
ಇದನ್ನೂ ವೀಕ್ಷಿಸಿ: ಅನ್ನಭಾಗ್ಯದ 6 ಸಾವಿರ ಕ್ವಿಂಟಾಲ್ ಅಕ್ಕಿಯೇ ಮಾಯ..! 6 ತಿಂಗಳಲ್ಲಿ ಎರಡನೇ ಬಾರಿ ನಡೆಯಿತು ಕಳ್ಳತನ..!