Nov 16, 2022, 3:16 PM IST
ನಂಬಿ ಬಂದ ಉಕ್ರೇನ್ ದಂಪತಿಗೆ ಇಂಬು ಕೊಟ್ಟಿದ್ದಾನೆ ತುಳುನಾಡ ಕಾರಣಿಕ ದೈವ ಕೊರಗಜ್ಜ. ಸಪ್ತಸಾಗರಗಳನ್ನು ದಾಟಿ ಬಂದಿದ್ದ ದಂಪತಿಯ ಮಗನ ಕಾಯಿಲೆಯನ್ನು 21 ದಿನಗಳಲ್ಲಿ ಗುಣಪಡಿಸಿದ್ದಾನೆ. ತುಳುನಾಡಲ್ಲಿ ಕೊರಗಜ್ಜನ ಪವಾಡಗಳಿಗೆ, ಕಾರಣಿಕಕ್ಕೆ ಮಾರು ಹೋಗದವರೇ ಇಲ್ಲ. ಇದೀಗ ಕೊರಗಜ್ಜನ ಮಹಿಮೆ ಸಪ್ತಸಾಗರಗಳನ್ನು ದಾಟಿ ದೂರದ ಯುದ್ಧಭೂಮಿ ಉಕ್ರೇನ್'ವರೆಗೂ ಪಸರಿಸಿದೆ. ನಂಬಿ ಬಂದಿದ್ದ ವಿದೇಶೀ ಪ್ರಜೆಗಳಿಗೆ ಇಂಬು ಕೊಟ್ಟು ಅಭಯ ನೀಡಿ ಕಳುಹಿಸಿದ್ದಾನೆ ತುಳುನಾಡಿನ ಕಾರಣಿಕ ದೈವ ಕೊರಗಜ್ಜ.