May 24, 2024, 11:22 AM IST
ಬೆಂಗಳೂರು ಅಭಿವೃದ್ಧಿ ಕುಂಠಿತ ಸಂಬಂಧ ಚರ್ಚೆ ನಡೆಯಲಿದ್ದು, ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ(BJP) ರೆಡಿಯಾಗಿದೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಭೆ(Meeting) ಆಯೋಜನೆ ಮಾಡಲಾಗಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ನೇತೃತ್ವದಲ್ಲಿ ಸಭೆ ಜರುಗಲಿದೆ. ಸರ್ಕಾರದ ಬ್ರ್ಯಾಂಡ್ ಬೆಂಗಳೂರು(Brand Bengaluru) ವಿಫಲ ಎಂದು ಬಿಜೆಪಿ ಆರೋಪ ಮಾಡುತ್ತಿದ್ದು, ಮಳೆಗಾಲಕ್ಕೆ(Rain) ಮುನ್ನೆಚ್ಚರಿಕೆ ಇಲ್ಲ ಎಂದು ಟೀಕೆ ಮಾಡಿದೆ. ಈ ಮೂಲಕ ಬಿಬಿಎಂಪಿ ಚುನಾವಣೆಗೆ ಮುನ್ನ ಜನರ ಗಮನ ಸೆಳೆಯಲು ಪ್ರಯತ್ನ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಬ್ರಾಂಡ್ ಬೆಂಗಳೂರು ಘೋಷಣೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ ಮಾಡಲಿದೆ. ಅಲ್ಲದೆ ಬ್ರಾಂಡ್ ಬೆಂಗಳೂರು ಕಾಮಗಾರಿ ಏನು..? ರಾಜ್ಯ ಸರ್ಕಾರ ಇಲ್ಲಿ ತನಕ ಏನು ಮಾಡಿದೆ ? ಎಂಬ ಪ್ರಶ್ನೆಯನ್ನು ಹಾಕಲಿದ್ದು, ಟನಲ್ ನಿರ್ಮಾಣಕ್ಕೆ 36 ಸಾವಿರ ಕೋಟಿ ಮೀಸಲಿಟ್ಟಿದ್ದಕ್ಕೆ ಟೀಕೆ ಮಾಡಲು ಸಜ್ಜಾಗಿದೆ. ಅಂದರೆ ಇದು ಕಮಿಷನ್‌ಗಾಗಿ ಇಟ್ಟ ಹಣ ಎಂದು ಆರೋಪ ಮಾಡಿದೆ. ಜೊತೆಗೆ ಬ್ರಾಂಡ್ ಬೆಂಗಳೂರು ಅಭಿವೃದ್ಧಿಗೆ ಶಾಸಕರನ್ನು ವಿಶ್ವಾಸಕ್ಕೆ ಪಡೆದಿಲ್ಲ ಎನ್ನುವ ಬಾಣವನ್ನೂ ಸಹ ಬಿಡಲಿದೆ ಬಿಜೆಪಿ.
ಇದನ್ನೂ ವೀಕ್ಷಿಸಿ: Swati Maliwal Assault Case: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತನಿಂದ ಹಲ್ಲೆ ಪ್ರಕರಣ: ಈ ಬಗ್ಗೆ ಸ್ವಾತಿ ಮಲಿವಾಲ ಹೇಳಿದ್ದೇನು..?