Feb 7, 2023, 4:46 PM IST
ಕಲ್ಯಾಣ ಕರ್ನಾಟಕದಲ್ಲೇ ತಿಂಥಣಿ ಶ್ರೀ ಮೌನೇಶ್ವರ ಜಾತ್ರೆ ಅತಿ ಸುಪ್ರಸಿದ್ಧಿ ಪಡೆದಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ದೇಶದ ವಿವಿಧ ಕಡೆಯಿಂದ ಸಾಧುಗಳ ಆಗಮಿಸುತ್ತಾರೆ. ವಿಶೇಷ ಅಂದ್ರೆ ಸಾಧುಗಳು ಕೈಲಾಸ ಕಟ್ಟೆಯಲ್ಲಿ ಕುಳಿತು ಭಕ್ತರು ತಂದು ಕೊಟ್ಟ ಗಾಜಾ ಸೇದುತ್ತಾರೆ. ಜಾತ್ರೆಯ ಐದು ದಿನಗಳ ಕಾಲ ನಿತ್ಯ ಗಾಂಜಾ ಸೇದುತ್ತಾರೆ. ಗಾಂಜಾ ಸೇದುವುದರಿಂದ ಕೈಲಾಸ ಪ್ರಾಪ್ತಿಯಾಗುತ್ತದೆ ಎಂದು ಸಾಧುಗಳ ನಂಬಿಕೆ ಇದೆ. ಕೈಲಾಸ ಕಟ್ಟಿಯಲ್ಲೇ ಕುಳಿತು ಗಾಂಜಾ ಸೇವನೆಗೆ ಯಾವುದೇ ನಿರ್ಬಂಧ ಇಲ್ಲ. ಇದೊಂದು ಪುಣ್ಯಭೂಮಿ ಆಗಿದ್ದು, ಇಲ್ಲಿಗೆ ಸಾವಿರಾರು ಸಾಧುಗಳು ಬರ್ತಾರೆ. ಭಕ್ತರು ನೀಡುವ ಸಿದ್ಧಪತ್ರೆ(ಗಾಂಜಾ) ಸ್ವೀಕರಿಸುತ್ತಾರೆ.