ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ಬಬ್ಬು ಸ್ವಾಮಿ ದೈವ!

ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ಬಬ್ಬು ಸ್ವಾಮಿ ದೈವ!

Published : Jul 13, 2024, 03:41 PM IST

ಉಡುಪಿಯ ದೈವ ಸನ್ನಿಧಿಯಲ್ಲಿ ಪವಾಡವೊಂದು ನಡೆದಿದ್ದು, 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅದರಂತೆ ಇದೀಗ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಉಡುಪಿ: ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ ನಡೆದಿದೆ. ಉಡುಪಿಯ(Udupi) ಚಿಟ್ಪಾಡಿ ಕಸ್ತೂರಬಾ ನಗರ ಬಬ್ಬು ಸ್ವಾಮಿ(Babbu swamy) ಸನ್ನಿಧಾನ ಈ ಘಟನೆ ನಡೆದಿದೆ. 24 ಗಂಟೆಯೊಳಗೆ ಕಳ್ಳನನ್ನು(Theft) ದೈವ ಹುಡುಕಿಕೊಟ್ಟಿದೆ. ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಗಿತ್ತು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನೆ? ಇಡಲಾಗಿತ್ತು. ಊರಿನ ಸಂಕಷ್ಟ ಬಗೆಹರಿಸುವ ದೈವ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರವಾಗಿದ್ದು, 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಜು. 6ರ ಬೆಳಗ್ಗೆ ಕಳ್ಳ ಪತ್ತೆಯಾಗಿದ್ದು, ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕನಿಂದ ಗುರುತು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಗಲಕೋಟೆ ಮೂಲದ ಮುದುಕಪ್ಪ ಪೊಲೀಸರಿಗೆ ಸೆರೆಯಾದ ಕಳ್ಳ. ಬೆಳಗ್ಗೆ ಎಂಟು ಗಂಟೆಯಾದರೂ ಮಂಪರಿನಲ್ಲಿ ಮಲಗಿದ್ದ ಕಳ್ಳ, ಕೊನೆಗೂ ಬಬ್ಬು ಸ್ವಾಮಿ ದೈವ ಮಾತು ಉಳಿಸಿಕೊಂಡಿದೆ. ದೈವದ ಕಾರ್ಣಿಕಕ್ಕೆ ಭಕ್ತರು ಅಚ್ಚರಿಗೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  Bengaluru News: ಆಟೋ ಚಾಲಕನಿಂದ ರ್‍ಯಾಶ್ ಡ್ರೈವಿಂಗ್‌: ಬೈಕ್‌,ಪಾದಚಾರಿಗೆ ಗುದ್ದಿ ಎಸ್ಕೇಪ್‌..ವಿಡಿಯೋ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more