Jul 17, 2024, 5:54 PM IST
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯಿಂದ (Rain) ಒಂದಡೆ ಅನಾಹುತ ಆದ್ರೆ ಮತ್ತೊಂದೆಡೆ ಪ್ರಕೃತಿ ಸೊಬಗು ಅನಾವರಣಗೊಂಡಿದೆ. ಸತತ ಮಳೆದಿಂದ ತೀರ್ಥಕೆರೆ ಜಲಪಾತದ(Theerthakere Falls) ಸೌಬಗು ಅನಾವರಣಗೊಂಡಿದೆ. ದಟ್ಟ ಕಾನನದ ಹಸಿರು ಹಾದಿಯನ್ನು ಸೀಳಿ ಫಾಲ್ಸ್ ಧುಮ್ಮುಕ್ಕುತ್ತಿದೆ. ಬೆಳ್ನೊರೆಯಾಗಿ ನೆಲವನ್ನು ತೀರ್ಥಕೆರೆ ಫಾಲ್ಸ್ ಸ್ಪರ್ಶಿಸುತ್ತಿದೆ. ಮಳೆಯಿಂದ ನೀರಿನ ಬಣ್ಣವೇ ಬದಲಾವಣೆಯಾಗಿದ್ದು, ಫಾಲ್ಸ್ ಮೈತುಂಬಿ ಹರಿಯುತ್ತಿದೆ. ಕಪ್ಪನೆಯ ಬಂಡೆಗಳ ಮಧ್ಯೆ ಕೆಂಬಣ್ಣದ ರೀತಿಯಲ್ಲಿ ಫಾಲ್ಸ್ ಧುಮ್ಮುಕ್ಕುತ್ತಿದೆ. ಮನಮೋಹಕ ಜಲಪಾತದ ದೃಶ್ಯ ಅನಾವರಣವಾಗಿದೆ. ಅಲ್ಲದೇ ಫಾಲ್ಸ್ ತನ್ನತ್ತ ಪ್ರವಾಸಿಗರನ್ನು ಸೆಳೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ತೀರ್ಥಕೆರೆ ಜಲಪಾತ ಇದಾಗಿದೆ.
ಇದನ್ನೂ ವೀಕ್ಷಿಸಿ: ಸದನ ಕದನ ರಣಾಂಗಣ ಆಗಿದ್ದೇಕೆ ಗೊತ್ತಾ..? ವಿಪಕ್ಷಗಳ ಆರೋಪಕ್ಕೆ ಸರ್ಕಾರ ನೀಡಿದ ಉತ್ತರವೇನು ?