Feb 11, 2024, 11:04 AM IST
ತುಮಕೂರು ಜಿಲ್ಲೆಯಲ್ಲಿ ಮೌಡ್ಯಾಚರಣೆ(Superstition) ಇನ್ನೂ ಜೀವಂತವಾಗಿದ್ದು, ಬಾಣಂತಿ ಮತ್ತು ಹಸುಗೂಸನ್ನು(Baby) ಗ್ರಾಮಸ್ಥರು ಊರಾಚೆ ಇರಿಸಿದ್ದಾರೆ. ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಣಂತಿ(Woman) ಬಾಲಮ್ಮ ಹಾಗೂ 1 ತಿಂಗಳ ಮಗುವನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ಈ ವಿಷಯ ತಿಳಿದ ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದು, ಶಿರಾ ಜೆಎಂಎಫ್‌ಸಿ ಕೋರ್ಟ್‌ನ ಜಡ್ಜ್ ಗೀತಾಂಜಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗ್ರಾಮದಲ್ಲಿ ಮೌಡ್ಯದ ವಿರುದ್ಧ ಜಾಗೃತಿ ಮೂಡಿಸಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ವಾಪಸ್ ಮನೆಗೆ ಸೇರಿಸಿದ್ದಾರೆ. ಮತ್ತೆ ಘಟನೆ ಮರುಕಳಿಸಿದರೇ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಅವನಿಗಿತ್ತು ತನ್ನ ಹೆಂಡತಿಯನ್ನ ಕೊಂದ ಅನುಭವ..! ಸೂಸೈಡ್ ಅಂತ ಬಂದ್ರು, ಆದ್ರೆ ಅದು ಕೊಲೆ..!